'ಆರ್ ಪಿ ಸಿ' ಗೆ ಯುವಕ ಬಲಿ
ಮೂಡುಬಿದಿರೆ : ಹಣ ಮಾಡುವ ಭರದಲ್ಲಿ ಆನ್ಲೈನ್ ಆಪ್ ಗೆ ಸಾವಿರಾರು ರೂಗಳನ್ನು ಹೂಡಿಕೆ ಮಾಡಿ ಇದೀಗ ಕಳೆದುಕೊಂಡ ಯುವಕನೋವ೯ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು “RPC” ಎಂಬುವ ಆಪ್ ನಲ್ಲಿ ಕೇವಲ ವಿಡಿಯೋಗಳನ್ನು ನೋಡುವ ಮೂಲಕ ಹಣ ಸಂಪಾದಿಸಬಹುದು ಎನ್ನುವ ಯೋಜನೆಯನ್ನು ಕೆಲ ತಿಂಗಳಿಂದ ತಂದಿದ್ದು ಹಲವರು ಈ ಜಾಲಕ್ಕೆ ಒಳಗಾಗಿ ತಮ್ಮ ಹಣವನ್ನು ಹೂಡಿ ಮೊದಲಿಗೆ ಲಾಭ ಮಾಡಿಕೊಂಡಿದ್ದು ತದನಂತರ ಇದೊಂದು ತಂಡವಾಗಿ ಬೆಳೆದಿದ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಹಾಗೂ ನಂಬಿಕೆ ಬರುವಂತಹ ಬಣ್ಣದ ಮಾತುಗಳಿಗೆ ಒಳಗಾಗಿ ಲಕ್ಷ ಲಕ್ಷಗಟ್ಟಲೆ ಈ ಸಂಸ್ಥೆಗೆ ಹಣವನ್ನು ಹೂಡಿ ಮೊನ್ನೆ ಡಿಸೆಂಬರ್ 24 ತಾರೀಕಿನಂದು, ಈ ಆಪ್ ಎಲ್ಲರಿಗೂ ಕೈ ಎತ್ತಿ ಬಿಟ್ಟಿದೆ ಮೊನ್ನೆ ಡಿಸೆಂಬರ್ 24ರಂದು ಕಾಣೆಯಾದ ಮೂಡುಶೆಡ್ಡೆಯ ಯುವಕ ಸೂರ್ಯ (24) ಇವನ ಶವವು ಮರವೂರು ಸೇತುವೆಯ ನದಿಯಲ್ಲಿ ನಿನ್ನೆ ಪತ್ತೆಯಾಗಿದ್ದು ಮೂಲಗಳ ಪ್ರಕಾರ ಈತನು ಕೂಡ RPC ಕಂಪನಿಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಹೂಡಿಕೆ ಮಾಡಿದ್ದು ಕಂಪನಿಯ ಆಪ್ ಕೆಲಸ ಮಾಡಿದ ಕಾರಣ ಈ ಕಂಪನಿ ಫ್ರಾಡ್ ಎಂದು ತಿಳಿದಾಗ ಸಾಲದ ಸುಳಿಗೆ ಬಿದ್ದಿರುವುದನ್ನು ಅರಿತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಧ್ಯಮದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ದಿನಕ್ಕೆ ಹಲವಾರು ಸುದ್ದಿಗಳು ಬರುತ್ತಿತ್ತು, ಆದರೂ ಕೂಡ ಜನರು ಕ್ಷಣಾರ್ಧದಲ್ಲಿ ದುಡ್ಡು ಸಂಪಾದಿಸಲು ಇಂತಹ ಮೋಸದ ಜಾಲಗಳಿಗೆ ಒಳಗಾಗುತ್ತಿರುವುದು ದುರದೃಷ್ಟಕರ.
ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
0 Comments