*ಹಕ್ಕೊತ್ತಾಯ ಸಮಾವೇಶ* ದಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳು *"ಡಿ.ಕೆ.ಶಿ ಅಭಯ"*

ಜಾಹೀರಾತು/Advertisment
ಜಾಹೀರಾತು/Advertisment

 "ಬೆಳಗಾವಿ ಬಸ್ತವಾಡ ಜೈನ 

*ಹಕ್ಕೊತ್ತಾಯ ಸಮಾವೇಶ* ದಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳು  *"ಡಿ.ಕೆ.ಶಿ ಅಭಯ"*


*"ನಾನು ನಿಮ್ಮ ಜೊತೆ ಇದ್ದೇನೆ"* *ಚಿಂತೆ ಬೇಡ : ಡಿ .ಕೆ. ಶಿವಕುಮಾರ್"*

 ಬೆಳಗಾವಿಯ ಬಸ್ತವಾಡದಲ್ಲಿ ಜೈನ ಧರ್ಮೀಯರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಆರಂಭವಾಗಿರುವ ಜೈನ    ಹಕ್ಕೊತ್ತಾಯ ಸಮಾವೇಶಕ್ಕೆ ಆಗಮಿಸಿದ  ಲಕ್ಷ್ಮಣ ಸವದಿಯವರು ಮಾತನಾಡಿ ಕಾಂಗ್ರೆಸ್ ಪಕ್ಷದ ಮೂಲ ಚಿಹ್ನೆ ಗಳು ಜೈನರ ಕೊಡುಗೆಯಿದೆ, ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಇಂದಿರಾಗಾಂಧಿಯವರಿಗೆ ಜೈನಾಚಾರ್ಯ ವಿದ್ಯಾನಂದ  ಮುನಿಗಳು *ಅಭಯಹಸ್ತದ* ವಿನಯ ಕೊಟ್ಟು ಅಭಯ ನೀಡಿ ಆಶೀರ್ವದಿಸಿದ್ದರು.. ಇಂದು ಜೈನರ ಹಸ್ತ ನಮ್ಮ ಪಕ್ಷದ ಮೇಲಿದ್ದು. ನಿಮ್ಮ ಬೇಡಿಕೆಗಳು ಸೂಕ್ತವಾಗಿವೆ ಈ ಬಗ್ಗೆ ನಾನು ನಿಮ್ಮೊಂದಿಗೆ ಇದ್ದೇನೆ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದರು. 


        ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ  *"ನಾನು ನಿಮ್ಮ ಜೊತೆ ಇದ್ದೇನೆ ಚಿಂತೆ ಮಾಡಬೇಡಿ"* ಈ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ , ಕಾಂಗ್ರೆಸ್ ಎಲ್ಲರನ್ನೂ  ವಿಶ್ವಾಸಕ್ಕೆ ತೆಗೆದುಕೊಂಡು, ಈ ಬಗ್ಗೆ ಸಂಪುಟದಲ್ಲಿ ವಿಚಾರ ಮಂಡಿಸುತ್ತೇನೆ ,*ಜೈನ ಜನಾಂಗದ ಬೇಡಿಕೆ ಈಡೇರಿಸಿ ತೀರುತ್ತೇನೆ.* ಎಂದು  ನೆರೆದಿದ್ದ ಜೈನ ಸಮುದಾಯಕ್ಕೆ ಅಭಯ ನೀಡಿದರು.


 ಅವರಿಂದು ಬೆಳಗಾವಿಯ ಬಸ್ತವಾಡದಲ್ಲಿ ನಡೆದ *ಕರ್ನಾಟಕ ಜೈನ ಸಮಾಜದ ಹಕ್ಕುಗಳ ಹೋರಾಟ ಒಕ್ಕೂಟದ* ನೇತೃತ್ವದಲ್ಲಿ ಹಾಗೂ ರಾಷ್ಟ್ರಸಂತ *ಆಚಾರ್ಯಶ್ರೀ ಗುಣದರ ನಂದಿ ಮಹಾರಾಜರ ದಿವ್ಯ ಸಾನಿಧ್ಯ ನೇತೃತ್ವದಲ್ಲಿ* ಮತ್ತು ಸಮಸ್ತ ಭಟ್ಟಾರಕ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆದ ಜೈನ ಸಮಾಜದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆದ ಜೈನ  ಹಕ್ಕೊತ್ತಾಯ ಹೋರಾಟದ  ಸಮಾವೇಶದಲ್ಲಿ ಮಾತನಾಡಿದರು.


  ಜೈನ ಸಮುದಾಯದ ಹಕ್ಕು- ಬೇಡಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬೇಡಿಕೆ ಈಡೇರಿಸಲು ಸಿದ್ಧನಿದ್ದೇನೆ, ಈ ಸಂಬಂಧ ಸಚಿವರಾದ ಲಕ್ಷ್ಮೀ  ಹೆಬ್ಬಾಳ್ಕರ್,  ಸತೀಶ್ ಜಾರಕಿಹೊಳಿ ಹಾಗೂ ಡಿ .ಸುಧಾಕರ್ ಸಹ ಸಂಪುಟದಲ್ಲಿ ಹೋರಾಟ ನಡೆಸಿದ್ದಾರೆ. ಎಂದು ಅವರು ,ನಿಮ್ಮ ಜೊತೆ ನಾನಿದ್ದೇನೆ ಬರೆದಿಟ್ಟುಕೊಳ್ಳಿ ನಿಮ್ಮ ಸಂಬಂಧ ಭಕ್ತಿ ,ಭಾವದ್ಧಾಗಿದ್ದು ನೆಮ್ಮದಿ ಶಾಂತಿ ಸಮಾಧಾನಕ್ಕೆ *ನಿಮ್ಮ  ಮಕ್ಕಳ ಭವಿಷ್ಯದ ಆರ್ಥಿಕ ಸಾಮಾಜಿಕ ಸಬಲೀಕರಣದಿಂದ ಬೆಳೆಯುವಂತಾಗಲಿ* ಕುಟುಂಬಕ್ಕೆ ಒಳ್ಳೆಯದಾಗಲಿ ಎಂದರು.


 ನೀವೆಲ್ಲರೂ ನಿಮ್ಮ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಒಗ್ಗಟ್ಟಿನಿಂದ ಇಲ್ಲಿಗೆ ಬಂದಿದ್ದೀರಿ ,ಇತಿಹಾಸ ಹೊಂದಿದ್ದ ಈ ಧರ್ಮವನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಸೋನಿಯೋ ಗಾಂಧಿಯವರೊಂದಿಗೆ ಚರ್ಚಿಸಿ 1995ರಲ್ಲಿ ಜೈನ ಸಮುದಾಯವನ್ನು ಅಲ್ಪಸಂಖ್ಯಾತ ಸಮುದಾಯ ಎಂದು ಘೋಷಿಸಿದರು ಇದು ಇತಿಹಾಸ, *"ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ"* ಇದು ಅಂಬೇಡ್ಕರ್ ಅವರ   ನಿಲುವಾಗಿತ್ತು. ನಮಗೆ ದೇವರು ಎರಡು ಕೈಗಳನ್ನು ನೀಡಿದ್ದು ಒಂದು ಕೈ  ನಮ್ಮನ್ನು ಕಾಪಾಡಿಕೊಳ್ಳೋದು , ಇನ್ನೊಂದು ನಮ್ಮನ್ನು ನಂಬಿದವರಿಗೆ ಸಹಕಾರ ನೀಡುವುದು ಎಂದರು.


" ಮೊಟ್ಟೆ"   ವಿಚಾರದಲ್ಲಿ ಜೈನ ಸಮುದಾಯ ಹಲವು ಬಾರಿ ಇದನ್ನು  ರದ್ದು ಮಾಡುವಂತೆ ಕೋರಿದ್ದಾರೆ ನಾನು ನಿಮ್ಮ ನಂಬಿಕೆಗಳನ್ನು ಪರಿಶೀಲಿಸಿ, ಸರ್ಕಾರದ ಆದೇಶಗಳನ್ನು ಮರು ಪರಿಶೀಲಿಸಿ, ನಿಮ್ಮ ಗೌರವ ಸ್ವಾಭಿಮಾನ ಅಹಿಂಸಾ ತತ್ವದ ಪದ್ಧತಿಯನ್ನು ರಕ್ಷಿಸುತ್ತೇನೆ. ನಿಮ್ಮ ಎಲ್ಲಾ ಮನವಿಯನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದರು.


 ಕಾರ್ಯಕ್ರಮದಲ್ಲಿ ಕೊಲ್ಲಾಪುರ,ನಾಂದಣಿ, ಹೊಂಬುಜ ಸ್ವಾದಿ ಸೊಂದಾ, ಮೂಡುಬಿದರೆ ಜೈನ ಶ್ರೀಮಠಗಳ ಭಟ್ಟಾರಕ ಸ್ವಾಮೀಜಿಗಳು, ಸಚಿವರಾದ  ಸತೀಶ್ ಜಾರಕಿಹೊಳಿ , ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಡಿ.ಸುಧಾಕರ್ , ಶಾಸಕರಾದ ಅಭಯ ಪಾಟೀಲ್,  ಮಾಜಿ ಶಾಸಕ ಸಂಜಯ್ ಪಾಟೀಲ್  ಮಾಜಿ ಸಚಿವರಾದ ಪ್ರಕಾಶ್ ಹುಕ್ಕೇರಿ,   ವೀರ್ ಕುಮಾರ್ ಪಾಟೀಲ್, *ಹುಬ್ಬಳಿಯ ಮಹೇಂದ್ರ ಸಿಂಘ್ವಿ* , ಮುಖಂಡರಾದ ಶೀತಲ್  ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ  ಕಾರ್ಯಧ್ಯಕ್ಷೇ ಪದ್ಮಪ್ರಕಾಶ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ .ವಿಜಯೇಂದ್ರ ಸೇರಿದಂತೆ ಬೆಳಗಾವಿಯ *ಸಂಘಟನಾ ಚತುರ ಅಭಯ್ ಅವಲಕ್ಕಿ* - *ಸಂದೀಪ ಸೈಬಣ್ಣನವರ್* ರವರ ಸಂಯೋಜನೆಯ *ಸಮರ್ಪೀತ  ಯುವ ಸಂಘಟನೆಯ ಕಾರ್ಯಕರ್ತರು* ತುಮಕೂರಿನ ಪ್ರಮುಖಸಾಗರ ಸೇವಾ ಸಮಿತಿಯ ಸಾಮಾಜಿಕ ಹೋರಾಟಗಾರ   *ಪಚ್ಚೆಶ್ ಜೈನ್ ಆಣೆಕಾರ್*, ಕಲಬುರ್ಗಿಯ ಗ್ಲೋಬಲ್ ಮಹಾಸಭಾರ *ಮಹೇಶ್ ಕಾಸರ್ ಜೈನ್*, ಹುಬ್ಬಳ್ಳಿಯ‌ *ಯುವ ಸಂಘಟಕ ವಿನಾಯಕ ಶೆಟ್ಟಿ*, ವೀರ ಸೇವಾದಳದ *ವೃಷಭ ಬಾಳೇಕಾಯಿ*, ವಕೀಲರಾದ *ವರ್ಧಮಾನ್ ಕೋರಿ*, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕುಗಳು, ಹೋಬಳಿಗಳ ಜೈನ ಮಂದಿರ, ಜೈನ ಸಮಾಜ,ಸಂಘ, ಮಂಡಳಿಗಳ ಪದಾಧಿಕಾರಿಗಳು ,ಜೈನ ಸಮಾಜದ ಅರ್ಚಕರು -  ಪುರೋಹಿತರಸಂಘ, ಮಹಿಳಾ ಒಕ್ಕೂಟ, ಮಹಿಳಾ ಸಂಘ, ಜೈನ ಶಿಕ್ಷಣ ಸಂಸ್ಥೆಗಳು, ಜೈನ ಸಂಘಟನೆಗಳ ಪದಾಧಿಕಾರಿಗಳು, ನೂರಾರು ವಿವಿಧ ಜೈನ ಸಮಿತಿಗಳ ಸದಸ್ಯರುಗಳು, ಶ್ರಾವಕ - ಶ್ರಾವಕಿಯರು ಸೇರಿದಂತೆ  ಲಕ್ಷಾಂತರ ಜನರು ಕರ್ನಾಟಕ, ಮಹಾರಾಷ್ಟ್ರಗಳಿಂದಲೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತಿಹಾಸ ಸೃಷ್ಟಿಸಿದ ಈ ಐತಿಹಾಸಿಕ ಜೈನ ಸಮಾಜದ  ಹಕ್ಕೋತ್ತಾಯ ಸಮಾವೇಶಕ್ಕೆ ಸಾಗರದಂತೆ ಹರಿದು ಬಂದ ಜನರಿಗೆ *ಸ್ಥಳಿಯ ಬಸ್ತವಾಡದ ಜೈನ ಬಂದುಗಳು ಉಪಹಾರ ಭೋಜನದ ಸುವ್ಯವಸ್ಥಿತವಾಗಿ ಮಾಡಿದ್ದರು.*


Post a Comment

0 Comments