ಶಾಸಕರ ಅವಿರತ ಶ್ರಮಕ್ಕೆ ದಿಗ್ವಿಜಯ:ಮೂಡುಬಿದಿರೆಗೆ ಬಂದೇ ಬಿಡ್ತು ಸರ್ಕಾರಿ ಬಸ್:ಧನ್ಯವಾದಗಳು ಶಾಸಕರೇ
ಮೂಡುಬಿದಿರೆಗೆ ಸರ್ಕಾರಿ ಬಸ್ ದೂರದ ಮಾತಾಗಿತ್ತು. ಅನೇಕ ವರ್ಷಗಳಿಂದ ಮಂಗಳೂರು ಮೂಡುಬಿದರೆ ಕಾರ್ಕಳ ರಾಷ್ಟ್ರೀಯ ಹೆದ್ದಾರಿಗೆ ಸರ್ಕಾರಿ ಬಸ್ ಬರಬೇಕೆಂಬ ಕೂಗು ಕೇಳಿ ಬರುತ್ತಿದ್ದಾದರೂ ಈವರೆಗೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಮಾನ್ಯ ಉಮನಾಥ್ ಕೋಟ್ಯಾನ್ ರವರು ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾದ ಬಳಿಕ ಈ ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಿತ್ತು. ಮಾತ್ರವಲ್ಲದೆ ಇದು ಶಾಸಕರ ಚುನಾವಣಾ ಪೂರ್ವ ಆಶ್ವಾಸನೆಯೂ ಆಗಿತ್ತು. ಹೀಗಾಗಿ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿ ಬೆನ್ನು ಹತ್ತಿದ್ದರು.
ಸತತ ಪ್ರಯತ್ನಪಟ್ಟು ಮೂಡುಬಿದಿರೆಗೆ ಕೆಎಸ್ಆರ್ಟಿಸಿ ಬಸ್ ತರಬೇಕೆಂಬ ಉತ್ಸಾಹ ಹಾಗೂ ಹೋರಾಟವನ್ನು ಶಾಸಕರು ಮಾಡುತ್ತಲೇ ಬರುತ್ತಿದ್ದರು. ಪರಿಣಾಮ ಈ ಬಾರಿ ಮೂಡುಬಿದಿರೆಗೆ ಸರ್ಕಾರಿ ಬಸ್ ಘೋಷಣೆ ಮಾಡುವ ಮೂಲಕ ಶುಭ ಸುದ್ದಿಯನ್ನು ನೀಡಿದೆ. ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿಯೂ ವಿಚಾರಣೆ ನಡೆಯುತ್ತಿದ್ದು ಇದೀಗ ನ್ಯಾಯಾಲಯವು ಸರ್ಕಾರಿ ಬಸ್ ಒದಗಿಸಬೇಕೆಂಬ ಆದೇಶವನ್ನು ನೀಡಿದ್ದು ಖುದ್ದು ಜಿಲ್ಲಾಧಿಕಾರಿಗಳೇ ಶಾಸಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ಬಸ್ಸಿನ ಬಗ್ಗೆ ಪ್ರಶ್ನೆ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಯವ ಬಗ್ಗೆ ಶಾಸಕರು ತಯಾರಿ ನಡೆಸುತ್ತಿರುವ ಮಧ್ಯೆ ಸ್ವತಃ ಜಿಲ್ಲಾಧಿಕಾರಿಗಳಿಂದ ಈ ಸುದ್ದಿಯು ಬಂದಿದ್ದು ಮೂಡುಬಿದರೆ ಜನತೆ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
0 Comments