" ಜಿನ ಭಜನೆಯಿಂದ ಆತ್ಮಕ್ಕೆ ಉತ್ತಮ ಪರಿಣಾಮ : ಅನಿತಾ ಸುರೇಂದ್ರ ಕುಮಾರ್"
ಪುರಾತನ ಸಂಸ್ಕೃತಿ -ಸಂಸ್ಕಾರದ ಪ್ರತಿಕವಾಗಿರುವ ಜಿನ ಭಜನೆ ಆತ್ಮಕ್ಕೆ ಉತ್ತಮ ಪರಿಣಾಮ ಬೀರಲಿದೆ ಎಂದು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು.
ಅವರಿಂದು ಇಲ್ಲಿನ ಹೊಂಬುಜ ಶ್ರೀ ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ - 8 ರ ಮಲೆನಾಡು ವಿಭಾಗ ಮಟ್ಟದ ಜಿನ ಭಜನೆ ಸ್ಪರ್ಧೆ 2024 ರ ಸೀಜನ್ 8ರ
ಕಾರ್ಯಕ್ರಮ ದ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಮಾತನಾಡಿದರು.
ಈ ಹಿಂದೆ ಆಚಾರ್ಯರು, ಮುನಿಗಳು, ಭಟ್ಟರಕರು ಜೊತೆ ಸಂಸ್ಕೃತಿ ಸಂಸ್ಕಾರಗಳ ಪಾಲನೆ, ಆಹಾರ ಧಾನಗಳ ಪಾಲನೆ ನಡುವೆ ಭಜನೆ ದೇವರ ಸ್ಮರಣೆ ಪರಿಪಾಠವಿತ್ತು, ಆಧುನಿಕತೆ ಕಾಲಘಟ್ಟದಲ್ಲಿ ಎಲ್ಲವೂ ಅಸ್ತಿತ್ವ ಕಳೆದುಕೊಂಡು ನಂತರದ ದಿನಗಳಲ್ಲಿ ಜಿನಭಜನೆಗೆ ಜನರು 7. ವಿಭಾಗಗಳಲ್ಲಿ ಆದ್ಯತೆ ನೀಡುತ್ತಿದ್ದಾರೆ. ಹೊರನಾಡು ಜಯಶ್ರೀರವರು ತಮ್ಮ ಗಾನ -ಸಿರಿಕಂಠ ದಿಂದ ಜನರ ಮನಸ್ಸನ್ನು ಗೆದ್ದು ಯುಗಳ ಮುನಿಗಳ ವಿಶ್ವಾಸಕ್ಕೆ, ಸಮಾಜದ ವಿಶ್ವಾಸಕ್ಕೆಪಾತ್ರರಾಗಿದ್ದಾರೆ, ಅವರು ಯೂಟ್ಯೂಬ್ ಸಂತಸ ತಂದಿದೆ ಎಂದರು.
ಬಾಹುಬಲಿ ಭಜನಾ ಮಹಾಮಸ್ತಕ ಅಭಿಷೇಕ ಶ್ರವಣಬೆಳಗೊಳ ಶ್ರೀಗಳ ಆಶಯವಾಗಿತ್ತು ಎಲ್ಲರ ಪ್ರೋತ್ಸಾಹದಿಂದ ಇದು ಯಶಸ್ಸು ಕಂಡಿತು ,
ಭಜನೆ ಮನೋ ಧರ್ಮದಿಂದ ಧರ್ಮ ಮುನ್ನಡೆದಿದೆ ಧರ್ಮವನ್ನು ಪುಸ್ತಕದಿಂದ ಪಡೆಯಬಹುದು ಆದರೆ ಸಂಸ್ಕಾರ ಪುಸ್ತಕದಿಂದ ಬರುವುದಿಲ್ಲ , ಜಿನ ಭಜನೆ ಮತ್ತು ಧರ್ಮದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಅಗತ್ಯ ಆದ ರಿಂದ ಧರ್ಮ ಬೆಳೆಯಲು ಸಾಧ್ಯ ಎಂದರು. ಇದು ಆತ್ಮಕ್ಕೆ ಒಳ್ಳೆ ಪರಿಣಾಮ ಬೀರಲಿದೆ , ಬಹುಮಾನ ಕ್ಕಾಗಿ ಭಜನೆ ಬೇಡ ಎಂದವರು, ಭಜನೆಯಿಂದ ದೂರವಾಗದೆ ಅದನ್ನ ಉಳಿಸಿ ಬೆಳೆಸಿ, ಯಾವುದಕ್ಕೂ ಪ್ರಚಾರ ಅಗತ್ಯ ಎಂದರು .
ತ್ಯಾಗದಿಂದ ಸುಖ ಬಾಹುಬಲಿಯ ಈ ತತ್ವದಿಂದ ಜೈನ ಧರ್ಮದ ಬೆಳವಣಿಗೆಯಾಗಿದೆ ,ದ್ವೇಷ ,ಅಜ್ಞಾನ , ಅಸೂಯೆ ಯಿಂದ ದೂರವಾಗಲು ಭಜನೆ ಅತಿ ಅಗತ್ಯ ಎಂದರು .ತೀರ್ಥಂಕರರ ಉಪದೇಶ ಪಾಲನೆ ಅಗತ್ಯ ,ಪರೋಪಕರ ,ಸುಜ್ಞಾನ ಅಳವಡಿಸಿಕೊಳ್ಳುವಂತೆ ಕರೆ ನೀಡಿದ ಅವರು, ಭಜನೆ ಕಲಿತು ಸಂಸ್ಕೃತಿ ,ಸಂಸ್ಕಾರ ಉಳಿಸಿ ಬೆಳೆಸಿ ಎಂದರು.
ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಕಾರ್ಯಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಮಾತನಾಡಿ ಜ ಜಿನಭಜನೆ ಸಂತಸ ತಂದಿದ್ದು ,ಜನರು ಪ್ರೋತ್ಸಾಹ ನೀಡುತ್ತಿದ್ದಾರೆ .ಯಾವುದೇ ವಿಚಾರಕ್ಕೆ ಚರ್ಚೆ ಅಗತ್ಯ. ಯುಗಳ ಮುನಿಗಳು ದಿನಕ್ಕೆ 30 km ವಿಹಾರ ಮಾಡುತ್ತಿದ್ದರು. ವಿಹಾರ ಅವರ ಜೀವನವಾಗಿದ್ದು ಇದರಿಂದ ಪುಣ್ಯ ಪಡೆಯುತ್ತಿದ್ದಾರೆ ಇಂತಹ ಪುಣ್ಯ ಗಳಿಕೆಗೆ ಧರ್ಮದ ರಕ್ಷಣೆ ಮಾಡೋಣ ಎಂದರು.
ಶಿವಮೊಗ್ಗ ಜೈನ್ ಮಿಲನ್ ಅಧ್ಯಕ್ಷ ಎ.ಪಿ .ಅಪ್ಪಣ್ಣಜ್ಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಜಿನ ಭಜನೆ ಯ ತೀರ್ಪುಗಾರರಾಗಿ ಸ್ನೇಹ ಶ್ರೀ ನಿರ್ಮಲ ಹಾಗೂ ಪ್ರಜ್ವಲ್ ಭುಜಬಲ್ ಕಾರ್ಯ ನಿರ್ವಹಿಸಿದರು .
ಕಾರ್ಯಕ್ರಮದಲ್ಲಿ ಜಿನ ಭಜನ ಕೇಂದ್ರ ಸಮಿತಿಯ ಸಂಯೋಜಕ ಪಿ. ಅಜಿತ್ ಕುಮಾರ್, ಶಿವಮೊಗ್ಗ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಯರಾಜು. ಬಿ. ಪಾಂಡೆ, ಪ್ರಿಯಕರಣಿ ಮಹಿಳಾ ಸಂಘದ ಶೀಲಾ ಶಿರಸಪ್ಪ ಗೋಗಿ ,ಮಾಜಿ ಅಧ್ಯಕ್ಷ ರಾಧಾ ಯಶಸ್ಪತಿ ಹೆಗಡೆ ಡಾ. ಜೀವoದರ್ ಜೈನ್, ಕೆ.ಜೇ.ಎ ನಿರ್ದೇಶಕ ಹಾಗೂ ಭಾರತೀಯ ಜೈನ್ ಮಿಲನ್ ವಲಯ- 8 ಮಲೆನಾಡ ವಿಭಾಗದ ಉಪಾಧ್ಯಕ್ಷ ಕೆ .ಯಶೋಧರ ಹೆಗಡೆ. ಜಿ.ಡಿ ಬ್ರಹ್ಮಪ್ಪ ಭಾರತೀಯ ಜೈನ್ ಮಿಲನ್ ವಲಯ -8 ರ ಮಂಗಳೂರು ವಿಭಾಗದ ಸೋಮಶೇಖರ ಶೆಟ್ಟಿ,ಶಿವಮೊಗ್ಗ ಜೈನ್ ಮಿಲನ್ನನ ಪದ್ಮ ಕುಮಾರ್, ಮಹಾವೀರ ಹೆಗಡೆ, , ಜ್ಯೋತಿ ನೇಮಿರಾಜು ಲಿಂಗನಮಕ್ಕಿ, ನಾಗರಾಜ್ ಜೈನ್ ಎಸ.ಪ್ರಕಾಶ್ ,ದಕ್ಷಿಣಂಕ ,ಆರ್ .ಸಂಪತ್ ಕುಮಾರ್ ಪ್ರಕಾಶ್ .ಪಿ.ಗೋಗಿ, ನಿರ್ದೇಶಕರಾದ ಅಲ್ಪನಾ ರೇವಡಿ, ವೀಣಾ ,ರೋಹಿಣಿ ಪ್ರಶಾಂತ್ ,ಮಾಲತಿ ಕುಬೇರಪ್ಪ, ಮಹಾವೀರ್ ಪ್ರಸಾದ್ ,ಜಯಶ್ರೀ ಹೊರನಾಡು ,,ಕೆ ಜೆ.ಎ .ನಿರ್ದೇಶಕ ರತ್ನಕುಮಾರ್, ಕಾರ್ಯದರ್ಶಿ ಡಿ.ಪೂರ್ಣಿಮ ಅಶೋಕ್ ಕುಮಾರ್ ,ನಿರ್ದೇಶಕರಾದ ಬಿ.ಡಿ. ಧರ್ಮಪಾಲ್ ಜೈನ್, ದೇವರಾಜು ಜೈನ್ ಕುಪ್ಪಾಡಿ- ವಗಕರೆ, ಸೇರಿದಂತೆ ಜೈನ್ ಮಿಲನ್ ಶಿವಮೊಗ್ಗ , ವಳಗೆರೆ -ಮಾದ್ಲುಗೋಡು, ಕಾನೂರು -ಹೇರೂರು ,ಹಾರಿಗೆ , ವಗಕೆರೆ, ವಡನ ಬೈಲು- ಹೆನ್ನಿ ಕಳಸ ಸೇರಿದಂತೆ ಮಲೆನಾಡ ಜೈನ ಮಿಲನ್ ಶೃಂಗೇರಿ, ಸೃಷ್ಟಿ ಜೈನ್ ಮಿಲನ್ ಹಾರೇಕೊಪ್ಪ ಜೈನ್ ಮಿಲನ್ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ - ಶ್ರಾವಕಿಯರು ಭಾಗವಹಿಸಿದ್ದರು.ರೋಹಿಣಿ ಪ್ರಶಾಂತ ತಂಡ ಪ್ರಾರ್ಥಿಸಿದರು. ಬಿ ಡಿ ಧನಪಾಲ್ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು
ಮಲೆನಾಡ ಜೈನ್ ಮಿಲನ್ ಜಿನ ಭಜನೆ ಸ್ಪರ್ಧಾ ಫಲಿತಾಂಶ
ಹಿರಿಯರ ವಿಭಾಗ ಕ್ರಮವಾಗಿ ಸುಸ್ವರ ಜಿನ ಭಜನಾ ತಂಡ ಹೊರನಾಡು. ಕೈವಲ್ಯ ತಂಡ ಸಾಗರ.ಓಂಕಾರ ತಂಡ ಹೊರನಾಡು. ಸೆಮಿ ಫೈನಲ್ ಗೆ ದಿವ್ಯಧ್ವನಿ ತಂಡ ಹೊರನಾಡು.
ಕಿರಿಯರ ವಿಭಾಗ ಕ್ರಮವಾಗಿ ಸಿದ್ಧಿ ಪದ್ಮಾವತಿ ಜಿನ ಭಜನಾ ತಂಡ ಹೊರನಾಡು .ಯಶಸ್ಪತಿ ಹೆಗಡೆ ತಂಡ ಪಾರಸ ತಂಡ ಮಲೆನಾಡು ಸೊಗಡು ಮಂಡವಳ್ಳಿ ಕೂಶ್ಮಂಡನಿ ತಂಡ ಸೆಮಿ ಫೈನಲ್ ಪ್ರವೇಶಿಸಿದೆ.
0 Comments