ಅಂಚೆ ಇಲಾಖೆಯಿಂದ ಆಳ್ವಾಸ್ ವಿರಾಸತ್ ನಲ್ಲಿ ವಿಶೇಷ ಅಂಚೆ ಕವರ್ ಬಿಡುಗಡೆ*

ಜಾಹೀರಾತು/Advertisment
ಜಾಹೀರಾತು/Advertisment

 ಅಂಚೆ ಇಲಾಖೆಯಿಂದ ಆಳ್ವಾಸ್ ವಿರಾಸತ್ ನಲ್ಲಿ ವಿಶೇಷ ಅಂಚೆ ಕವರ್ ಬಿಡುಗಡೆ* 

ಮೂಡುಬಿದಿರೆ:  ಆಳ್ವಾಸ್ ಸಂಸ್ಥೆಯು ಆಯೋಜಿಸಿರುವ   ಆಳ್ವಾಸ್ ವಿರಾಸತ್  ಸಂದರ್ಭದಲ್ಲಿ ಪುತ್ತೂರು ಅಂಚೆ ವಿಭಾಗವು ವಿಶೇಷವಾದ ಅಂಚೆ ಲಕೋಟೆಯನ್ನು ಮಂಗಳವಾರ ಬಿಡುಗಡೆ ಮಾಡಿತು. 

ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಲಕೋಟೆಯನ್ನು ಅಂಚೆ ಕಚೇರಿಯ ಮಳಿಗೆಯಲ್ಲಿ ಬಿಡುಗಡೆ ಮಾಡಿ  ಮಾತನಾಡಿ ಅವರು ಜ್ಞಾನ ಜಾತ್ರೆ, ಜ್ಞಾನ ಯಾತ್ರೆಯ ಸಾಂಸ್ಕೃತಿಕ ಉತ್ಸವ  ಆಳ್ವಾಸ್ ವಿರಾಸತ್  ಸವಿ ನೆನಪಿಗಾಗಿ ಬಿಡುಗಡೆಯಾಗುತ್ತಿರುವ ವಿಶೇಷ ಅಂಚೆ ಲಕೋಟೆಯು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ ಎಂದರು. ವೇದಿಕೆಯಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ಕೌಟ್ ಗೈಡ್ಸ್ ನ ರಾಜ್ಯ ಸಂಚಾಲಕ ಪಿ ಜಿ ಆರ್ ಸಿಂಧ್ಯಾ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕುರಿಯನ್, ಬಂಟ್ವಾಳ ಸಹಾಯಕ ಅಂಚೆ ಅಧೀಕ್ಷಕ ಪ್ರಹ್ಲಾದ್ ನಾಯಕ್, ಕಾರ್ಕಳ ಸಹಾಯಕ ಅಂಚೆ ಅಧೀಕ್ಷ ಕ ಮೋಹನ್ ಹಾಗೂ ಇತರರು ಹಾಜರಿದ್ದರು.

Post a Comment

0 Comments