*ಸಂಗ್ರಹದಿಂದ ಸುಖ ಇಲ್ಲ.. ಮಹಾವೀರರ ಆರ್ಥಿಕ ಚಿಂತನೆಗಳು ಇಂದಿಗೆ ಪ್ರಸ್ತುತ : ಡಾ/ ಜಯಕುಮಾರ್ ಶೆಟ್ಟಿ .*

ಜಾಹೀರಾತು/Advertisment
ಜಾಹೀರಾತು/Advertisment

 *ಸಂಗ್ರಹದಿಂದ ಸುಖ ಇಲ್ಲ.. ಮಹಾವೀರರ ಆರ್ಥಿಕ ಚಿಂತನೆಗಳು ಇಂದಿಗೆ ಪ್ರಸ್ತುತ : ಡಾ/ ಜಯಕುಮಾರ್ ಶೆಟ್ಟಿ 


ವರ್ಧಮಾನ ಮಹಾವೀರರ ಆರ್ಥಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು ಆಧುನಿಕ ಅರ್ಥಶಾಸ್ತ್ರಜ್ಞರು ಈ ಕಡೆಗೆ ಒಲುಮೆ ತೋರುವ ಸಮಯ ಸನ್ಹಿತವಾಗಿದೆ ಎಂಬುದಾಗಿ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾಕ್ಟರ್ ಜಯಕುಮಾರ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು .ಮೂಡುಬಿದರೆ ಜೈನ್ ಮಿಲನ್ ಮಾಸಿಕ ಸಭೆಯ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಾ ಬೇಡಿಕೆ ಅಪರಿಮಿತವಾಗಿದೆ ಆದರೆ ಪೂರೈಕೆ ಅಥವಾ ಸಂಪನ್ಮೂಲಗಳು ನಿಯಮಿತವಾಗಿದೆ ಅದಕ್ಕೆ ಸರಿಯಾಗಿ ಆಸೆ ಇರಬೇಕಾದದ್ದು ಸಹಜ ಆದರೆ ಇಂದು ಬೇಡಿಕೆಗಳು ಹೆಚ್ಚಾಗಿವೆ ಸಂಪನ್ಮೂಲವನ್ನು ಹೆಚ್ಚು ಮಾಡು ಎನ್ನುವ ಚಿಂತನೆಯಿಂದಾಗಿ ಮಾನಸಿಕ ನೆಮ್ಮದಿ ಇಲ್ಲವಾಗಿದೆ ಇದನ್ನು ಸರಿದೂಗಿಸಲು ಭಗವಾನ್ ಮಹಾವೀರರ ಚಿಂತನೆಗಳು ಇಂದಿನ ಆರ್ಥಿಕ ನೀತಿ ಆಗಬೇಕಿದೆ ಎಂದು ವಿವರಿಸಿದರು .

ಕಾರ್ಯಕ್ರಮದಲ್ಲಿ  ವಲಯ ವಿಭಾಗ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದ ಜಿನಭಜನಾ ತಂಡಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ತಂಡಗಳ ಮೂಲಕ ಕಲಾ ಸೇವೆ ಮಾಡುತ್ತಿರುವ ಮಕ್ಕಿಮನೆ ಸುದೇಶ್ ಅವರನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ  ಶ್ರೀಮತಿ ರಶ್ಮಿತಾ ಯುವರಾಜ್ ಜೈನ್ ..ಅವರನ್ನು ಸನ್ಮಾನ ಪತ್ರ ಸಹಿತವಾಗಿ ಸನ್ಮಾನಿಸಲಾಯಿತು.


 ಮಿಲನ್ ಅಧ್ಯಕ್ಷರಾದ ವೀರ ದಿನೇಶ್ ಆನಡ್ಕ ಅವರ ಅನುಪಸ್ಥಿತಿಯಲ್ಲಿ ಡಾ.ಪ್ರಭಾತ್ ಬಲ್ನಾಡು ಅಧ್ಯಕ್ಷತೆ ವಹಿಸಿದ್ದರು .ಕಾರ್ಯದರ್ಶಿ ವೀರ ರಾಜೇಶ್ ಎಂ ಅವರಿಂದ ವರದಿ ವಾಚನ ಖಜಾಂಜಿ ಪುಷ್ಪರಾಜ್ ಜೈನ್ ಅವರಿಂದ ಅತಿಥಿಗಳ ಪರಿಚಯ ಅನಂತವೀರ್ ಜೈನ್ ಅವರು ಕಾರ್ಯಕ್ರಮ ನಿರೂಪಿಸಿದರು .ಶ್ರೀ ಜಯರಾಜ ಕಂಬಳಿ ಶ್ರೀಮತಿ ಶ್ವೇತಾ ಜೈನ್ ಶ್ರೀ ಧನ ಕೀರ್ತಿ ಬಲಿಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಜಿನಭಜನಾ ವಿಜೇತ ತಂಡದವರಿಂದ ಜಿನಭಜನಾ ಕಾರ್ಯಕ್ರಮ ನೆರವೇರಿತು

Post a Comment

0 Comments