"ಮಿಡಿಗೇಶಿ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷರ ವಾರ್ಷಿಕ ಪೂಜಾ ಸಂಪನ್ನ"

ಜಾಹೀರಾತು/Advertisment
ಜಾಹೀರಾತು/Advertisment

 "ಮಿಡಿಗೇಶಿ ಶ್ರೀ  ಸುಪಾರ್ಶ್ವನಾಥ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷರ ವಾರ್ಷಿಕ ಪೂಜಾ ಸಂಪನ್ನ" 


ಜ್ವಾಲಾ ಮಾಲಿನಿ ಅಮ್ಮನವರ  ಮೂರ್ತಿಪ್ರತಿಷ್ಠಾಪಿಸಲು ಎನ್.ಆರ್ .ಪುರ ಶ್ರೀಗಳ ಸಲಹೆ

 ಮಿಡಿಗೇಶಿ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮೀಡಿಗೇಶಿಯ ಶ್ರೀ ಸೂಪರ್ಶ್ವನಾಥ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷರ  ಜಿನ ಮಂದಿರದಲ್ಲಿ ಮಾತೆ ಶ್ರೀ  ಜ್ವಾಲಾ ಮಾಲಿನಿ ಅಮ್ಮನವರ ಮೂರ್ತಿ ಪ್ರತಿಷ್ಠಾಪಿಸುವಂತೆ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಬಸದಿ ಸಮಿತಿಗೆ ಸಲಹೆ ನೀಡಿದರು.


 ಅವರಿಂದು ಇಲ್ಲಿನ ಶ್ರೀ ಕ್ಷೇತ್ರ ಮಿಡಿಗೇಶಿ  ಜೈನ ಬಸದಿಯ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

 ಮಿಡಿಗೇಶಿ ಇತಿಹಾಸ ಪ್ರಸಿದ್ಧ ತಾಣ ,ಈ ಹಿಂದೆ ರಾಜಧಾನಿ ಆಗಿತ್ತು, ಹೊಯ್ಸಳ ವಾಸ್ತುಶಿಲ್ಪದ ಈ ಬಸದಿ  ಯಲ್ಲಿ ಜ್ವಾಲಾ ಮಾಲಿನಿ ಮಾತೆಯ ವಿಗ್ರಹ ಅಗತ್ಯವಿದೆ. ವಾರ್ಷಿಕ ಪೂಜೆಗಳಲ್ಲಿ ಜೈನ ಬಂಧುಗಳು ಸೇರಿ ಹಬ್ಬದ ಮಾದರಿ ವಾರ್ಷಿಕ ಪೂಜೆ ಆಚರಿಸುತ್ತಿರುವುದು. ಸಂತಸ ತಂದಿದೆ ಎಂದರು.


 ಪಾವನ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕನಕಗಿರಿಯ ಸ್ವಸ್ತಿ ಶ್ರೀ  ಭುವನ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಪೂಜೆಗಳನ್ನು ಶ್ರದ್ದ ಭಕ್ತಿಗಳಿಂದ ಆಚರಣೆ , ದೇವರ ಪೂಜೆ ,ಯಕ್ಷ ಯಕ್ಷರಿಗೆ ಮೊದಲ ಸ್ಥಾನವಿದೆ, ಇದರಿಂದ ಇತಿಹಾಸ ಪರಂಪರೆಗಳನ್ನು ಸೃಷ್ಟಿ ,ಧರ್ಮ  ಪ್ರಭಾವನೆ ಸಾಧ್ಯವಾಗಲಿದೆ ಎಂದರು. ಇದೊಂದು ಇತಿಹಾಸ ಪರಂಪರೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ ಎಂದರು.

 ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕಿ ಸಂಶೋಧಕಿ ಡಾ. ಎಸ್ ಗಂಗಾಂಬಿಕ ಗೋವರ್ಧನ್ ಮಾತನಾಡಿ ಜೈನ ಕವಿಗಳಾದ ರನ್ನ ,ಪಂಪ ಜನ್ನ, ಫೋನ್ನ ಹಾಗೂ ನಾಗಚಂದ್ರ  ರ  ಕೊಡುಗೆ ಹಾಗೂಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.

 ತುಮಕೂರಿನ ಶ್ರೀ ದಿಗಂಬರ ಜೈನ ಪಾರ್ಶ್ವನಾಥ   ಜಿನ ಮಂದಿರ ಸಮಿತಿ ಅಧ್ಯಕ್ಷ ಟಿ. ಡಿ .ಬಾಹುಬಲಿ ಬಾಬು ಮಾತನಾಡಿದರು.

 ಶ್ರೀಸೂಪಾರ್ಶ್ವನಾಥ ಜಿನ ಮಂದಿರ  ಅಧ್ಯಕ್ಷ  ಎ .ಎನ್ .ರಾಜೇಂದ್ರ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷರು ಹಾಗೂ ತುಮಕೂರು   ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷ ಕೆ .ಪಿ .ವೀರೇಂದ್ರ ,ಮಾಜಿ ಅಧ್ಯಕ್ಷರಾದ ವಿಮಲ್ ಕುಮಾರ್, ಲಕ್ಷ್ಮೀದೇವಮ್ಮ, ಪ್ರೇಮಲತಾ, ಕುಮಾರ್, ಅತ್ತಿಮಬ್ಬೆ ವಿದ್ಯಾ ಸಮಿತಿಯ ಜಲಜ ಜೈನ್, ಜ್ವಾಲಣ್ಣ, ವಿಜಯಕುಮಾರ್ ,ಸುರೇಶ್, ಮಾಣಿಕ್ಯ ರಾಜು ,ಸೇರಿದಂತೆ ಗೌರಿಬಿದನೂರು, ತುಮಕೂರು, ಅರಸಪುರ ,ಬಾದ ಮರಳೂರು, ಮಧುಗಿರಿ ,ಹಾಗು ಸುತ್ತಮುತ್ತಲ ಗ್ರಾಮಸ್ಥರುಗಳು ಶ್ರಾವಕ -ಶ್ರಾವಕರು ,ಮಹಿಳಾ ಸಂಘಟನೆಗಳು ಭಾಗವಹಿಸಿದ್ದವು.

 ಇದೇ ಸಂದರ್ಭದಲ್ಲಿ ಸಮಾಜದ ಏಳಿಗೆಗೆ ಶ್ರಮಿಸಿದ ಎಸ್. ಎಸ್ .ಎಲ್ ಸಿ , ಪಿ.ಯು.ಸಿ ಹಾಗೂ ಇಂಜಿನಿಯರಿಂಗ್ ಪದವಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

 ಪುರೋಹಿತ ರತ್ನ ನಾಗಕುಮಾರ್ ಪಂಡಿತ  ಹಾಗೂ ಸ್ಥಳೀಯ ಪುರೋಹಿತರಾದ  ಜೆ.ಪಿ. ಜ್ವಾಲೆoದ್ರ ಕುಮಾರ್  ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.ಭಾಗ್ಯ ಪ್ರಾರ್ಥಿಸಿದರು. ದೇವಕುಮಾರ್ ಸ್ವಾಗತಿಸಿದರು .ಎಚ್. ಆರ್. ಸುನಂದ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments