"ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರ : ಸಿದ್ದರಾಜ ಪೂಜಾರಿ"

ಜಾಹೀರಾತು/Advertisment
ಜಾಹೀರಾತು/Advertisment

 "ಕನ್ನಡ ಸಾಹಿತ್ಯಕ್ಕೆ  ಜೈನ ಕವಿಗಳ ಕೊಡುಗೆ  ಅಪಾರ : ಸಿದ್ದರಾಜ ಪೂಜಾರಿ"

 ಕನ್ನಡ ಸಾಹಿತ್ಯ, ಸಂಸ್ಕೃತಿ ,ಇತಿಹಾಸ, ಪರಂಪರೆಗೆ ಜೈನ ಕವಿಗಳ ಕೊಡುಗೆ ಅಪಾರವಾದದ್ದು ಅವುಗಳನ್ನು ಉಳಿಸಿ ಬೆಳೆಸಬೇಕು.

 ಅವರಿಂದು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಭಾರತೀಯ  ಜೈನ್ ಮಿಲನ್ ವಲಯ ಎಂಟರ ಜಮಖಂಡಿ ವಲಯ ಮಟ್ಟದ   ಜಿನ ಭಜನಾ ಸೀಸನ್ ಉದ್ಘಾಟಿಸಿ ಮಾತನಾಡಿದರು.

  ಜಿನ ಭಜನೆ ಅನಿತಾ ಸುರೇಂದ್ರ ಕುಮಾರ್ ರವರ ಕಲ್ಪನೆಯ ಕೂಸಾಗಿದೆ , ಜಿನ ಭಜನೆಯ ಉದ್ದೇಶ, ಇತಿಹಾಸ, ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸುವುದಾಗಿದೆ, ಆಧ್ಯಾತ್ಮಿಕತೆ ಕಡೆಗೆ ಒಲವು ಕಡಿಮೆಯಾಗಿದೆ .ವೈಭೋಗ ಗಳು ಹಾವಳಿಯಿಂದ ಧರ್ಮದ ಅಸ್ತಿತ್ವ ಕಳೆದುಕೊಳ್ಳುವ   ಭೀತಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

  ಅನಿತಾ ಸುರೇಂದ್ರ ಕುಮಾರ್ ದಂಪತಿಗಳು ಜಿನಭಜನೆಗೆ ಹೊಸ ರೂಪ ನೀಡುತ್ತಿದ್ದಾರೆ ಈಗ ಎಂಟನೇ   ಜಿನ ಭಜನೆಯಾಗಿದೆ ಎಂದ ಅವರು ಸಮಾಜ ಜೀವಂತವಾಗಿ ಉಳಿಯಬೇಕಾದರೆ ಕಲೆಗಳು ಉಳಿಯಬೇಕು, ಜನಸಾಹಿತ್ಯ ಉಳಿಯಲು ಜೈನ ಧರ್ಮ ಅಗತ್ಯವಾಗಿದೆ ಎಂದರು.

 ಕನ್ನಡ ಸಾಹಿತ್ಯದ ಮೂಲ ಪುರುಷರಾದ ಪಂಪ, ರನ್ನ,  ಜನ್ನ, ಪೊನ್ನ,j ನಾಗಚಂದ್ರರು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ , ಮಹಾವೀರದ ಕೊಡುಗೆ ಸತ್ಯ, ಧರ್ಮ, ಅಹಿಂಸೆ , ಯಾಗಿತ್ತು, ಭಗವಾನ್ ಶ್ರೀ ಮಹಾವೀರರ ಮೂಲ ಸೂತ್ರವೂ  ಅದೇ ಆಗಿತ್ತು ಎಂದರು.

 ಮಹಾವೀರರ ಲೌಕಿಕತ್ವಕ್ಕೆ ಆದ್ಯತೆ ನೀಡಿದರು ಪಾಪ ಪುಣ್ಯಗಳನ್ನು ಸಮಾಧಾನವಾಗಿ ಕಂಡರೂ, ದಾನ -ಧರ್ಮ ಮಾಡಿ ಪುಣ್ಯ ಸಂಪಾದಿಸಿಕೊಳ್ಳುವಂತೆ ಕರೆ ನೀಡಿದರು. ಎಲ್ಲಾ ಜೀವಗಳನ್ನು ಸಮಾನವಾಗಿ ಕಾಣುವುದು ಅಹಿಂಸ ತತ್ವ ಜೈನ ಧರ್ಮದ ಮೂಲ ಸೂತ್ರವೂ ಆಗಿದೆ ಎಂದರು.


  ಇಂದಿನ ಹಿಂಸಾ ಜಗತ್ತಿನಲ್ಲಿ ಜೈನ ಧರ್ಮ ಶಾಂತಿ ಸಂದೇಶ ನೀಡುತ್ತಿದ್ದು, ಜೈನ ಧರ್ಮದ ತತ್ವಗಳು ಆಚರಣೆಗೆ ಬಂದಿವೆ. ಇದರಿಂದ ಅಹಿಂಸಾ ಸಮಾಜ ನಿರ್ಮಾಣ ಸಾಧ್ಯ.    ಜಿನ ಭಜನೆಯಿಂದ ಜಿನ ಸಂಸ್ಕಾರದ ಜೊತೆಗೆ ಹೃದಯ ಸಂಸ್ಕಾರ ದೊರೆಯುತ್ತದೆ ಎಂದರು

 ಕಾರ್ಯಕ್ರಮದಲ್ಲಿ ಶ್ವೇತಾಂಬರ ಜೈನ ಸಮಾಜದ ವಿಮಲ್ ಚಂದ್ ಓಸ್ವಾಲ್, ಶ್ರೀ  ಪಾರ್ಶ್ವನಾಥ ಯುವಕ ಸಂಘದ ದಯಾನಂದ ಶಿರಗಾರ್, ಬಿ.ಪಿ. ಪರಮಗೊಂಡ, ಭಾರತೀಯ ಜೈನ  ಮಿಲನ  ಪ್ರಧಾನ ಕಾರ್ಯದರ್ಶಿ ಅಶೋಕ್ ಬಾಳೆಕಾಯಿ, ಧಾರವಾಡ ಎ ಎಸ್. ಡಿ.ಎಂ. ಸಂಸ್ಥೆಗಳ ಕಾರ್ಯದರ್ಶಿ ವಿ . ಜೀವೇಂದ್ರ ಕುಮಾರ್ ,ಅಬಕಾರಿ ಇಲಾಖೆಯ ಆದಿನಾಥ ನರಸಗೊಂಡ  ಭಾಗವಹಿಸಿದ್ದರು.

ಧರ್ಮನಾಥ ಶ್ವೇತಾಂಬರ ಪಾಠಶಾಲಾ ಮಕ್ಕಳು ಪ್ರಾರ್ಥಿಸಿದರು. ಮಹಾವೀರ್ ಶಹಪುರ್ ಸ್ವಾಗತಿಸಿ- ಪ್ರಾಸ್ತಾವಿಕ ನುಡಿಗಳನ್ನಾಡಿದರು.

Post a Comment

0 Comments