ರಸ್ತೆಗೆ ಬಿದ್ದಿದ್ದ ಮರ ತೆರವುಗೊಳಿಸಿ ಮಾನವೀಯತೆ ಮೆರೆದ ಯುವಕರು
ಮೂಡುಬಿದಿರೆ: ಹಂಡೇಲು ಬಳಿ ರಸ್ತೆಗೆ ಬಿದ್ದಿದ್ದ ಮರವೊಂದನ್ನು ತೆರವುಗೊಳಿಸಿ ಮತ್ತು ಸೋಮವಾರ ನಡೆದ ಬಸ್ ಹಾನಿಯಿಂದಾಗಿ ರಸ್ತೆಯಲ್ಲೇ ಬಾಕಿಯಾಗಿದ್ದ ಗಾಜಿನ ಹುಡಿಯನ್ನು ಗುಡಿಸಿ ಬಿಸಾಡುವ ಮೂಲಕ ಹಂಡೇಲಿನ ಕೆಲ ಯುವಕರು ಮಾನವೀಯತೆ ಮೆರೆದಿದ್ದಾರೆ.
ಹಂಡೇಲು ಬಳಿ ಮರವೊಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.ಇದನ್ನು ಮನಗಂಡ ಈ ಯುವಕರ ತಂಡ ಅದನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.
ಸೋಮವಾರ ಮೈಟ್ ಕಾಲೇಜು ಎದುರು ಮಾಸ್ಟರ್ ಬಸ್ ಢಿಕ್ಕಿಯಿಂದಾಗಿ ಉಂಟಾದ ಪ್ರತಿಭಟನೆ ವೇಳೆ ಬಸ್ಸಿನ ಗಾಜನ್ನು ಹುಡಿ ಮಾಡಲಾಗಿತ್ತು. ಗಾಜಿನ ಹುಡಿಗಳು ರಸ್ತೆಯಲ್ಲೇ ಬಾಕಿಯಾಗಿತ್ತು. ಇದನ್ನು ಮನಗಂಡ ಫಿರೋಝ್ & ಟೀಮ್ ಅದನ್ನು ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಪುತ್ತಿಗೆ ಗ್ರಾ.ಪಂ.ಸದಸ್ಯ ಫಿರೋಝ್, ಸಂಶುದ್ದೀನ್,ಆಸಿಫ್,ಇಂತಿಯಾಝ್ ಮತ್ತಿತರ ಯುವಕರು ಸೇರಿ ಈ ಕೆಲಸ ಮಾಡುವ ಮೂಲಕ ಗಮನಸೆಳೆದಿದ್ದಾರೆ.
0 Comments