ಮೂಡುಬಿದಿರೆ; ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಸಮ್ಮೇಳನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ; ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಸಮ್ಮೇಳನ

ಮೂಡುಬಿದಿರೆ :  ಕ.ರಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕ ಮತ್ತು ಮೂಡುಬಿದಿರೆ ತಾಲೂಕು ಘಟಕ ಇವುಗಳ ಸಹಯೋಗದಲ್ಲಿ ಇಲ್ಲಿನ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ  ಪ್ರೌಢಶಾಲಾ ಸಹಶಿಕ್ಷಕರ ಜಿಲ್ಲಾ ಶೈಕ್ಷಣಿಕ ಸಮ್ಮೇಳನ,ಪ್ರತಿಭಾ ಪುರಸ್ಕಾರ, ಅಭಿನಂದನ ಕಾರ್ಯಕ್ರಮವು ಶನಿವಾರ ನಡೆಯಿತು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಉದ್ಘಾಟಿಸಿ ಮಾತನಾಡಿ ಸರಕಾರ ಎಲ್ಲ ಸರಕಾರಿ, ಅನುದಾನಿತ ಶಾಲೆಗಳಿಗೆ  ಪೂರ್ಣಾವಧಿ ಶಿಕ್ಷಕರು, ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಾಗಿದೆ ಶಿಕ್ಷಕರ ಮೇಲಿನ ಅನಗತ್ಯ ಒತ್ತಡ ಕಡಿಮೆ ಮಾಡಬೇಕಾಗಿದೆ ಎಂದರು.


  ಅವರು ಶಿಕ್ಷಕರ ನೇಮಕಾತಿ, ಸವಲತ್ತುಗಳನ್ನು ಒದಗಿಸು ವಿಚಾರದಲ್ಲಿ ಸರಕಾರಿ, ಅನುದಾನಿತ ಶಾಲೆಗಳೆಂದು ತಾರತಮ್ಯ ಧೋರಣೆ  ಸಲ್ಲದು. ಎಲ್ಲ ಮಕ್ಕಳಿಗೂ ಶಿಕ್ಷಣ ಲಭಿಸುವಂತೆ ನೋಡಿಕೊಳ್ಳಬೇಕಾದುದು ಸರಕಾರದ ಆದ್ಯ ಕರ್ತವ್ಯ ಎಂದರು.

"ಸುತ್ತೋಲೆ ಮತ್ತು ಕಾಯಿದೆ ಒಂದೇ ಅಲ್ಲ, ಐಎಎಸ್ ಅಧಿಕಾರಿಗಳು ವಸ್ತುಸ್ಥಿತಿ ಅರಿಯದೆ ಸುತ್ತೋಲೆ ಹೊರಡಿಸುವುದರಿಂದ ಸಮಸ್ಯೆಗಳಾಗುತ್ತಿವೆ ಎಂದರು.


ವಿಶ್ರಾಂತ ಶಿಕ್ಷಕ, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಶಿಖರೋಪನ್ಯಾಸವಿತ್ತರು. 

ಮುಖ್ಯ ಅತಿಥಿ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.

ಡಿಡಿಪಿಐ ವೆಂಕಟೇಶ ಪಟಗಾರ, ರಾಜಲಕ್ಷ್ಮೀ, ಮೂಡುಬಿದಿರೆ ಬಿಇಒ ವಿರೂಪಾಕ್ಷಪ್ಪ, ಅನ್ಯ ಕ್ಷೇತ್ರ ಶಿಕ್ಷಣಅಧಿಕಾರಿಗಳೂ ಕ್ಷೇತ್ರ ಸಮನ್ವಯಾಧಿಕಾರಿಗಳೂ ಸಿಟಿಇ, ಡಯಟ್ ಮೊದಲಾದ ವಿಭಾಗದ ಅಧಿಕಾರಿಗಳೂ ಇದ್ದರು.

ತಾ. ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್ ಪ್ರಸ್ತಾವನೆಗೈದರು.ಜಿಲ್ಲಾ ಕಾರ್ಯದರ್ಶಿ ಮಾರ್ಕ್ ಜೆ. ಮೆಂಡೋನ್ಸ ಶಿಕ್ಷಕರ ಬೇಡಿಕೆಗಳ ಬಗ್ಗೆ, ವಿಶೇಷವಾಗಿ ರಾಧಾಕೃಷ್ಣ ಅವರು ಗಣಿತ, ವಿಜ್ಞಆನ ಪಠ್ಯ ಕ್ರಮ ಪರಿಷ್ಕರಣೆ ಬಗ್ಗೆ ಮಾತನಾಡಿದರು. ಈ ಎಲ್ಲ ವಿಚಾರಗಳನ್ನು ಮನವಿ ರೂಪದಲ್ಲಿ ಭೋಜೇಗೌಡರಿಗೆ ಸಲ್ಲಿಸಲಾಯಿತು. ಸರಕಾರಿ ಸೇವಾ ನಿಯಮಗಳು (ಮನೋಹರ ಕಾಮತ್), ನೂತನ , ಹಳೆಯ ತೆರಿಗೆ ಪದ್ದತಿ (ಸಿ.ಎ. ಉಮೇಶ ರಾವ್) ಕುರಿತು ಮಾಹಿತಿ ನೀಡಲಾಯಿತು.


ವಿವಿಧ ವಿಷಯ, ವಿಭಾಗಗಳಲ್ಲಿ ಸಾಧಕ ಶಿಕ್ಷಕರು, ರಾಜ್ಯ, ಜಿಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು. ಕಾಶಿಪಟ್ಣ ಶಾಲಾ ಶಿಕ್ಷಕ ದೇವುದಾಸ್ ನಿರೂಪಿಸಿದರು.

Post a Comment

0 Comments