ಕಾರ್ಕಳ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಕಾರ್ಕಳ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ 

ಅಧ್ಯಕ್ಷರಾಗಿ ಶ್ವೇತಾ ಸಂತೋಷ್‌, ಕಾರ್ಯದರ್ಶಿಯಾಗಿ ಸುಷ್ಮಿತಾ ವಿಘ್ನೇಶ್‌  

ಕಾರ್ಕಳ : ಕಾರ್ಕಳ ಜೇಸಿಐ 52ನೇ ವರ್ಷದ ಅಧ್ಯಕ್ಷರಾಗಿ ರೆಂಜಾಳದ ಶ್ವೇತಾ ಸಂತೋಷ್‌ ಹಾಗೂ ಕಾರ್ಯಯರ್ಶಿಯಾಗಿ ಸುಷ್ಮಿತಾ ವಿಘ್ನೇಶ್‌ ಪ್ರಸಾದ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನ. 27ರಂದು ಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ರೇವತಿ ಶೆಟ್ಟಿ ಕೋಶಾಧಿಕಾರಿಯಾಗಿ ಆಯ್ಕೆಗೊಂಡರು. 

ಜೇಸಿಐ‌ ನಿಕಟಪೂರ್ವಾಧ್ಯಕ್ಷ ವಿಘ್ನೇಶ್‌ ಪ್ರಸಾದ್‌, ಪೂರ್ವಾಧ್ಯಕ್ಷರಾದ ಡಾ. ಮುರಳೀಧರ್‌ ಭಟ್‌ ಹಾಗೂ ದಿವ್ಯಾಸ್ಮಿತಾ ಭಟ್‌ ಚುನಾವಣಾಧಿಕಾರಿಯಾಗಿ ಸಹಕರಿಸಿದರು. 

ಜೇಸಿಐ ಪೂರ್ವ ವಲಯಾಧ್ಯಕ್ಷ ಚಿತ್ತರಂಜನ್‌ ಶೆಟ್ಟಿ, ಪೂರ್ವ ವಲಯ ಅಧಿಕಾರಿ ಪದ್ಮಪ್ರಸಾದ್‌ ಜೈನ್‌, ಪೂರ್ವ ಅಧ್ಯಕ್ಷ ವೃಷಭರಾಜ ಕಡಂಬ, ಪ್ರದೀಪ್‌ ನಾಯಕ್‌, ದಿನೇಶ್‌ ಕೆ., ಕಾರ್ಕಳ ಜೆಸಿಐ ಅಧ್ಯಕ್ಷ ಪ್ರಚೀತ್‌ ಕುಮಾರ್‌, ಕಾರ್ಯದರ್ಶಿ ಸುಶಾಂತ್‌ ಶೆಟ್ಟಿ, ಜೇಸಿ ಸದಸ್ಯರು ಈ ಸಂದರ್ಭದಲ್ಲಿದ್ದರು.

Post a Comment

0 Comments