ಮಹಾವೀರ ಕಾಲೇಜಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಕ್ಲಬ್ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಮಹಾವೀರ ಕಾಲೇಜಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಕ್ಲಬ್ ಉದ್ಘಾಟನೆ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಕ್ಲಬ್ ನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಪ್ರಸ್ತುತ ಮೈಂಡ್ ಫುಲ್ ಕನ್ಸಲ್ಟಿಂಗ್‌ನ ನಿರ್ವಹಣಾ ನಿರ್ದೇಶಕ ಸಂಜಯ್ ಭಟ್  ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಆರ್ಥಿಕ ಸ್ವಾತಂತ್ರ್ಯದ  ಬಗ್ಗೆ ವಿವರಿಸಿದರು.  

ಈ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮ ಬಿಸಿಎ ಪ್ರಜ್ವಲ್ ವಾಚಿಸಿದರು.  ಕ್ಲಬ್ಬಿನ ಮುಂದಿನ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಾದ ರೋಹಿಸ್ಟನ್ ಪಿಂಟೋ, ಸ್ಯಾಮ್ಯೂಯಲ್ ಜಸ್ಟನ್ ಸೆರಾವೊ, ಶ್ರಾವ್ಯ ಮತ್ತು ಯಜ್ಞೇಶ್ ವಿವರಿಸಿದರು.

ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಾಕ್ಷ  ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿ “ಹಣಕಾಸಿನ ನಿರ್ವಹಣೆ ಇಂದಿನ ಯುಗದಲ್ಲಿ ಅತಿ ಪ್ರಾಮುಖ್ಯವಾದುದಾಗಿದೆ.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ಕ್ಲಬ್ಬಿನ ಮೂಲಕ ಹಣಕಾಸಿನ ಸರಿಯದ ನಿರ್ವಹಣೆಯ ಬಗ್ಗೆ ಮಾಹಿತಿ ದೊರಕಲಿದೆ.  ಇದು ಅತ್ಯಂತ ಸವಾಲಿನ ಹಾಗೂ ಆಸಕ್ತಿದಾಯಕವಾದ ವಿಷಯವಾಗಿದೆ” ಎಂದರು.

ಎಸ್.ಎಂ.ಸಿ. ನಾಯಕತ್ವ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಗೌರಿ ವಾಚಿಸಿದರು.  

 ಕಾರ್ಯಕ್ರಮದ ಮುಖ್ಯ ರೂವಾರಿ ಸಂಜಯ್ ಭಟ್ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.  


 ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಕಾಲೇಜಿನ ವಿದ್ಯಾರ್ಥಿ ನಾಯಕಿ ಶೃತಿ ಪೇರಿ, ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ  ಜೋಸ್ಲಿನ್ ಪ್ರೀತಿ ಡಿಸೋಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ವಂದಿಸಿದರು.

Post a Comment

0 Comments