ಜುಗಾರಿ ಅಡ್ಡೆಗೆ ಪೊಲೀಸರಿಂದ ದಾಳಿ
ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂ.ವ್ಯಾಪ್ತಿಯ ಶಾಂತಿನಗರದ ಸರಕಾರಿ ಬಾವಿಯ ಹತ್ತಿರದ ಗುಡ್ಡೆಯಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ.
ಜುಗಾರಿ ದೊರೆತ ಮಾಹಿತಿಯಂತೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ.
ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ. ಯವರು ತನ್ನ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಸದಾಶಿವ, ಸುದರ್ಶನ್, ಪ್ರಕಾಶ್, ಪ್ರಶಾಂತ್, ಶಿವಕುಮಾರ್, ರೋಹಿತ್ ಎಂಬುವರನ್ನು ದಸ್ತಗಿರಿ ನಡೆಸಿದ್ದಾರೆ. ವಶದಲ್ಲಿದ್ದ ಇಸ್ಪೀಟ್ ಆಟಕ್ಕೆ ಉಪಯೋಗಿಸಿದ ನಗದು ಹಣ 3,560/- ರೂ, 52 ಇಸ್ಪೀಟ್ ಎಲೆಗಳು ಹಾಗೂ 4 ಮೇಣದ ಬತ್ತಿಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
0 Comments