ಮಂಗಳೂರಿನಲ್ಲಿ ಮೂರು ದಿನಗಳ ಮೀನುಗಾರಿಕೆ ತರಬೇತಿ

ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರಿನಲ್ಲಿ ಮೂರು ದಿನಗಳ ಮೀನುಗಾರಿಕೆ ತರಬೇತಿ


ದಕ್ಷಿಣ ಕನ್ನಡ :ಮಿಶ್ರ ಮೀನುಸಾಕಣೆ ಪದ್ಧತಿಗಳು ಕುರಿತು ತರಬೇತಿ ಕಾರ್ಯಕ್ರಮವು  ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ , ಹೈದರಾಬಾದ್ ಇವರ ಸಹಯೋಗದೊಂದಿಗೆ ಮೀನುಗಾರಿಕೆ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಮತ್ತು ವಿಸ್ತರಣಾ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ,  ಮಂಗಳೂರು ಇಲ್ಲಿ  ಮಿಶ್ರ ಮೀನುಸಾಕಣೆ ಪದ್ಧತಿಗಳ ಕುರಿತು 3 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ 26/11/24 ರಂದು ಆರಂಭಗೊಂಡಿತು.

 ಭಾರತ ದೇಶದಲ್ಲಿ ಮೀನು ಸಂಪನ್ಮೂಲವು ಹೇರಳವಾಗಿದ್ದು, ಮೀನು ಕೃಷಿಕರ  ಆರ್ಥಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಮುಖ್ಯ ಅತಿಥಿಗಳಾದ   ಸಿದ್ಧಯ್ಯ ಡಿ. ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಡಾ. ಎಸ್. ಎಂ. ಶಿವಪ್ರಕಾಶ್, ವಿಶ್ರಾಂತ ವಿಸ್ತರಣಾ ನಿರ್ದೇಶಕರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಅವರು ಶಿಭಿರಾರ್ಥಿಗಳಿಗೆ ಮೀನಿನ ಮಾರುಕಟ್ಟೆ ವ್ಯವಸ್ಥೆ ಕುರಿತು ಕಿರು ಪರಿಚಯ ನೀಡಿದರು.

ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ರವರಾದ ಡಾ. ಹೆಚ್.ಏನ್. ಆಂಜನೇಯಪ್ಪರವರು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಸಂಯೋಜಕರಾದ ಡಾ. ಎಸ್. ಆರ್. ಸೋಮಶೇಖರ್ ಅವರು ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

 ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ವಂದನಾ ಕೆ. ಅವರು ಮೀನುಕೃಷಿಕರು ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿಕೊಂಡರು. ಡಾ. ಅಮೋಘ ಕೆ.ಆರ್. ಅವರು ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮವು ನುರಿತ ಮೀನುಗಾರಿಕಾ ಸಂಪನ್ಮೂಲ ವ್ಯಕ್ತಿಗಳು, ಮೂಡುಬಿದಿರೆಯ ದೇವರಾಜ್ ಕೋಟ್ಯಾನ್  ಮತ್ತು ರಾಜೇಶ್ ಕೋಟ್ಯಾನ್  ಇವರ ಸಮಗ್ರ ಕೃಷಿ ಪದ್ಧತಿ ಕ್ಷೇತ್ರ ವೀಕ್ಷಣೆಯನ್ನು ಒಳಗೊಂಡಿದ್ದು ಯಶಸ್ವಿಯಾಗಿ ಮೂರು ದಿನಗಳು ಕಾಲ ಪೂರೈಸಿ 28/11/24 ರಂದು ಮುಕ್ತಾಯವಾಯಿತು.

  ವಂದನಾರ್ಪಣ ಕಾರ್ಯಕ್ರಮದಲ್ಲಿ  ಮಹೇಶ್ ಕುಮಾರ್, ಜನರಲ್ ಮ್ಯಾನೇಜರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು, ಡಾ ದೇವಿಪ್ರಸಾದ್, ಅಧ್ಯಕ್ಷರು,ರಾಜ್ಯ ಮೀನು ಕೃಷಿಕರ ಸಂಘ ಹಾಗೂ ಡಾ.ಟಿ.ಜೆ.ರಮೇಶ, ಹಿರಿಯ ವಿಜ್ಞಾನಗಳು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರುಗಳು  ಉಪಸ್ಥಿತರಿದ್ದರು.

Post a Comment

0 Comments