ಪುಚ್ಚೇರಿಕಟ್ಟೆ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ
ಮೂಡುಬಿದಿರೆ: ಪುಚ್ಚೇರಿ ಕಟ್ಟೆ ಅಂಗನವಾಡಿ ಕೇಂದ್ರ ಮತ್ತು ಸ.ಹಿ.ಪ್ರಾ ಶಾಲೆಯ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ವಾರ್ಡಿನ ಪುರಸಭಾ ಸದಸ್ಯ ಪುರಂದರ ದೇವಾಡಿಗ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜವಾಹರಲಾಲ್ ನೆಹರು ಕುರಿತು ಮಾತನಾಡಿದರು. ಅತಿಥಿಯಾಗಿ ಭಾಗವಹಿಸಿದ ಕೃತಿಕಾ ಅವರು ಅಂಗನವಾಡಿ ಮಕ್ಕಳ ಬಗ್ಗೆ ಮಾತನಾಡಿದರು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಮಿಶ್ರಿಯಾ, ಶಾಲಾ ಮುಖ್ಯ ಶಿಕ್ಷಕ ಸುರೇಂದ್ರ ಪೂಜಾರಿ ಹಾಗೂ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಪುಷ್ಪಾ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ವಿಜಯ ಅವರು ಕಾರ್ಯಕ್ರಮ ನಿರೂಪಿಸಿದರು. 2023- 24 ರಾಣಿ ಮಹಾರಾಣಿ ಆರ್ಡನ್ನು ಫಾತಿಮಾ ಅಹ್ನ ಮತ್ತು ರಿಷಿಕರಿಗೆ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಪುರಂದರ ದೇವಾಡಿಗ ಅವರು ಪುಟಾಣಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
0 Comments