ತುಳುಕೂಟ (ರಿ) ಬೆದ್ರದಿಂದ ಗೋವಾದಲ್ಲಿ ತುಳುನಾಡಿನ ಆಚರಣೆಗಳ ಪ್ರದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 ತುಳುಕೂಟ (ರಿ) ಬೆದ್ರದಿಂದ ಗೋವಾದಲ್ಲಿ ತುಳುನಾಡಿನ ಆಚರಣೆಗಳ ಪ್ರದರ್ಶನ

ಮೂಡುಬಿದಿರೆ: ಗೋವಾದಲ್ಲಿ ಗಣೇಶ್ ಕೆ.ಶೆಟ್ಟಿ ಇರ್ವತ್ತೂರು ನೇತೃತ್ವದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ  ತುಳುಕೂಟ ಗೋವಾ ಇದರ ಉದ್ಘಾಟನಾ  ಸಮಾರಂಭದಲ್ಲಿ ತುಳುಕೂಟ ಬೆದ್ರದ ವತಿಯಿಂದ ತುಳುನಾಡಿನಲ್ಲಿ 12 ತಿಂಗಳುಗಳ ಕಾಲ ಆಚರಿಸುವ ಆಚರಣೆಗಳ ಬಗ್ಗೆ ಪ್ರದರ್ಶನ ನಡೆಯುವ ಮೂಲಕ ಗಮನ ಸೆಳೆಯಿತು.


  ತುಳುಕೂಟ(ರಿ) ಬೆದ್ರ ಇದರ ಅಧ್ಯಕ್ಷ ಹೆಚ್ ಧನಕೀರ್ತಿ ಬಲಿಪ ಅವರ ನೇತೃತ್ವದಲ್ಲಿ ಪ್ರಶಾಂತ್ ಕೈಕಂಬ ಅವರ ಸಂಯೋಜನೆಯಲ್ಲಿ  ತುಳುವರು  12 ತಿಂಗಳುಗಳ ಕಾಲ ಆಚರಿಸುವ ಆಚರಣೆಗಳು ಮತ್ತು ತುಳು ಸಂಸ್ಕೃತಿಯ ಬಗ್ಗೆ 33 ಜನರ ತಂಡವು ಪ್ರದರ್ಶಿಸಿತು.


 ಬೆಳಗಿನ ವೇಳೆ ತುಳಸಿಗೆ ಪೂಜೆ ಮಾಡುವ ಮೂಲಕ ಆರಂಭವಾಗುವ ಈ ಕಿರು ಪ್ರಹಸನದಲ್ಲಿ ದೈವಕ್ಕೆ ಸಂಕ್ರಮಣ ಪೂಜೆ, ಕೃಷಿ ಚಟುವಟಿಕೆ, ಆಟಿ ತಿಂಗಳಲ್ಲಿ ಆಚರಿಸುವ ಆಟಿ ಅಮವಾಸ್ಯೆ,   ಆಟಿ ಕಡೆಂಜ ಕುಣಿತ, ಜಕ್ಕಮದಿನ ವೇಷ, ಕುಲೆತ ಮದ್ಮೆ,  ಗಣೇಶ ಚತುರ್ಥಿ, ಅಷ್ಟಮಿ ಆಚರಣೆ,  ನಾಗರ ಪಂಚಮಿ, ತೆನೆ ಹಾಕುವ, ಯಕ್ಷಗಾನ, ಮದುಮಗಳನ್ನು ಗಂಡನ ಮನೆಗೆ ಕಳುಹಿಸುವ ಕ್ರಮ, ಕೆಡ್ಡೆಸ,  ನಗರ  ಭಜನೆ, ಕನ್ಯಾಪು ನೃತ್ಯ, ದೀಪಾವಳಿ ಆಚರಣೆ, ಕಂಬಳ, ಕೋಳಿ ಅಂಕ,  ತೆಂಗಿನ ಕಾಯಿ ಒಡೆಯುವ ಆಟ, ಸಿರಿಯ ಕತೆ, ಮುಡಿಪು ಕಟ್ಟುವ ಕ್ರಮದ ಬಗ್ಗೆ ಪ್ರದರ್ಶನವು ಒಳಗೊಂಡಿತು.


  ಇದೇ ಕಿರು ಪ್ರಹಸವು  ಮಂಗಳೂರಿನಲ್ಲಿ ಈ ಹಿಂದೆ ನಡೆದ  ತುಳು ಉಚ್ಛಯ ಕಾರ್ಯಕ್ರಮದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಬಹುಮಾನದೊಂದಿಗೆ ರೂ.50,000 ನಗದು ಪುರಸ್ಕಾರವನ್ನು ಪಡೆದುಕೊಂಡಿತು.

Post a Comment

0 Comments