ಬೋರುಗುಡ್ಡೆಯಲ್ಲಿ ಸ್ವಚ್ಛತಾ ಅಭಿಯಾನ
ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋರುಗುಡ್ಡೆ, ಶಾಲಾಭಿವೃದ್ದಿ ಸಮಿತಿ ಹಿ ಪ್ರಾ ಶಾಲೆ ಬೋರುಗುಡ್ಡೆ ಹಾಗೂ ಗ್ರಾಮ ಪಂಚಾಯತ್ ನೆಲ್ಲಿಕಾರು ಇವುಗಳ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಶಾಲಾ ವಠಾರ ಬೋರುಗುಡ್ಡೆ ದೇವಸ್ಥಾನ ವಠಾರ ಹಾಗೂ ಮುಖ್ಯ ಪೇಟೆಯಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು.
ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಉಪಾಧ್ಯಕ್ಷೆ ಸುಶೀಲ ಸದಸ್ಯರಾದ ಜಯಂತ ಹೆಗ್ಡೆ ಆಶಾಲತಾ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸತೀಶ್, ಮಕ್ಕಳ ಪೋಷಕರು ಆಶಾ ಕಾರ್ಯಕರ್ತೆ ಶಾಲಾ ಮುಖ್ಯ ಶಿಕ್ಷಕಿ ಅನಸೂಯಾ ಸಹ ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು, ನಾಗರಿಕರು ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಭಾಗವಹಿಸಿದ್ದರು.
0 Comments