ಅಂತರಾಷ್ಟ್ರೀಯ ಕರಾಟೆ: ಮೂಡುಬಿದಿರೆಗೆ 'ಉತ್ತಮ ಕರಾಟೆ ತಂಡ' ಪ್ರಶಸ್ತಿ
ಮಂಗಳೂರಿನ ಶೌರ್ಯ ಹಾಗೂ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಸಂಸ್ಥೆ ಮಂಗಳೂರಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್-2024 ರಲ್ಲಿ ಮೂಡುಬಿದಿರೆಯ ಕರಾಟೆ ತಂಡವು ಹಲವು ಪದಕಗಳನ್ನು ಪಡೆಯುವ ಮೂಲಕ 'ಉತ್ತಮ ಕರಾಟೆ ತಂಡ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ.
ಪವನ್ ನಾಯಕ್,ತೇಜ್, ಸ್ವಾಬಿರ್,ಭವೀಸ್,ಮುಹಮ್ಮದ್ ಹಫೀಝ್ ಹಾಗೂ ಧನ್ವಿತ ಅವರು ಚಿನ್ನದ ಪದಕಗಳನ್ನು ಪಡೆದುಕೊಂಡರೆ ಆಯುಷ್,ಅದ್ವೀಸ್ ಎಸ್.ಪೂಜಾರಿ, ಸುಮಿತ್ ಎಸ್.ಶೆಟ್ಟಿ, ವಂಶಿಕಾ ಜೈನ್,ಶ್ರೀಯಾ ಕೋಟ್ಯಾನ್, ಸೈಫಾ,ಸ್ವರೂಪ್ ಆರ್.ಶೆಟ್ಟಿ ಹಾಗೂ ಇಶಾಮ್ ಇಸ್ಮಾಯಿಲ್ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.
ಮುಹಮ್ಮದ್ ಸಾಯಿದ್,ದೀಕ್ಷಣ್ ದೇವಾಡಿಗ,ಮಧುನು ಶ್ರೀ, ಸುಜ್ಞಾನಂದ ಆಚಾರ್ಯ, ಸಾನ್ವಿ ಆರ್.ನಾಯಕ್, ಇನಾರ ಮರಿಯ ಹಾಗೂ ಅನ್ಯ ಎಂ.ಅವರು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರೆಲ್ಲ ಈ ಪದಕಗಳನ್ನು ಪಡೆಯುವ ಮೂಲಕ ಉತ್ತಮ ಕರಾಟೆ ತಂಡ ಪ್ರಶಸ್ತಿ ಲಭಿಸಿದೆ.
ಪದಕ ವಿಜೇತರೆಲ್ಲರೂ ಮೂಡುಬಿದಿರೆಯ ರೆನ್ಶಿ ಮುಹಮ್ಮದ್ ನದೀಮ್ ಹಾಗೂ ಸರ್ಫ್ರಾಝ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
0 Comments