ಕೋಟರಿಗೆ ಮತ ಹಾಕಿದ್ದಕ್ಕೆ ಸಾರ್ಥಕವಾಯಿತು:ಮುಂಬೈನಲ್ಲಿ ಸಿಲುಕಿದ ಕರಾವಳಿ ಯಾತ್ರಾರ್ಥಿಗಳ ರೈಲ್ವೆ ಸಮಸ್ಯೆಗೆ ತುರ್ತು ಸ್ಪಂದಿಸಿದ ಸಂಸದರಿಗೆ ಭಾವನಾತ್ಮಕ ಸಂದೇಶ

ಜಾಹೀರಾತು/Advertisment
ಜಾಹೀರಾತು/Advertisment

 ಕೋಟರಿಗೆ ಮತ ಹಾಕಿದ್ದಕ್ಕೆ ಸಾರ್ಥಕವಾಯಿತು:ಮುಂಬೈನಲ್ಲಿ ಸಿಲುಕಿದ ಕರಾವಳಿ ಯಾತ್ರಾರ್ಥಿಗಳ ರೈಲ್ವೆ ಸಮಸ್ಯೆಗೆ ತುರ್ತು ಸ್ಪಂದಿಸಿದ ಸಂಸದರಿಗೆ ಭಾವನಾತ್ಮಕ ಸಂದೇಶ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಸುಮಾರು 80 ಮಂದಿ ಯಾತ್ರಾರ್ತಿಗಳು ಅಯೋಧ್ಯೆ, ಕಾಶಿ, ಪ್ರಯಾಗ್ ಸಹಿತ ಅನೇಕ ತೀರ್ಥಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು ಗುರುವಾರ ಸಂಜೆ ರಾಂಚಿಯಿಂದ ಶುಕ್ರವಾರ ಬೆಳಿಗ್ಗೆ ಮುಂಬೈ ತಲುಪಬೇಕಿದ್ದ ರೈಲು ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ತಾಂತ್ರಿಕ ದೋಷದಿಂದ ವಿಳಂಬವಾಗಿತ್ತು. ಹೀಗಾಗಿ ಮುಂಬೈಯಿಂದ ಕರಾವಳಿ ಕರ್ನಾಟಕದೆಡೆಗೆ ಬರಬೇಕಾಗಿದ್ದ ಎಕ್ಸ್ಪ್ರೆಸ್ ರೈಲು ಯಾತ್ರಾರ್ತಿಗಳಿಗೆ ಸಿಗದೇ ಹೊರಟುಬಂದಿತ್ತು. ಪೂರ್ವ ನಿಯೋಜಿತವಾಗಿದ್ದ ಮತ್ತು ಮುಂಗಡ ಟಿಕೆಟ್ ಬುಕಿಂಗ್ ಹೊಂದಿದ್ದ ಮತ್ಸ್ಯಗಂಧ ರೈಲು ಹೊರಟು ಬಂದಿದ್ದ ವಿಷಯ ತಿಳಿದು ಯಾತ್ರಾರ್ಥಿಗಳು ಗೊಂದಲಕ್ಕೀಡಾಗಿ ಕೂಡಲೇ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮೇಲ್ ಕಳುಹಿಸಿ ಮತ್ತು ದೂರವಾಣಿ ಮೂಲಕ ಸಮಸ್ಯೆಯನ್ನು ಹೇಳಿಕೊಂಡರು. ಭಾಗಶಃ ಹಿರಿಯ ನಾಗರಿಕರೇ ತುಂಬಿದ್ದ ಮತ್ತು ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ತುಂಬಿದ್ದ ಈ ಯಾತ್ರಾರ್ಥಿಗಳ ತಂಡ ಗೊಂದಲಕ್ಕೀಡಾಗಿದ್ದ ವಿಷಯವನ್ನು ತಿಳಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೂಡಲೇ ರೈಲ್ವೆ ಇಲಾಖೆಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದು ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ ಸೋಮಣ್ಣನವರ ಗಮನಕ್ಕೆ ತಂದಿದ್ದಾರೆ. 


ತುರ್ತು ಸ್ಪಂದಿಸಿದ ಸಚಿವರು ಹಾಗೂ ಇಲಾಖಾ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ರಾಂಚಿಯಿಂದ ಬರುವ ಸಮಯಕ್ಕೆ ಕರಾವಳಿ ಕರ್ನಾಟಕದಡೆಗೆ ತೆರಳುವ ರೈಲಿಗೆ ಹೊಸ ಕೋಚ್ ಅಳವಡಿಸುವ ಮೂಲಕ 80 ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಿದ್ದಾರೆ. ಉತ್ತರ ಕನ್ನಡ, ಉಡುಪಿ ಹಾಗೂ ಮಂಗಳೂರಿಗೆ ಬರಬೇಕಾಗಿದ್ದ ರೈಲು ಭರ್ತಿಯಾಗಿದ್ದು ಆಸನದ ಕೊರತೆ ಇತ್ತು, ಈ ಸಂದರ್ಭದಲ್ಲಿ ಅದೇ ರೈಲಿಗೆ ಹೊಸ ಕೋಚ್ ಅಳವಡಿಸಿ ಸುರಕ್ಷಿತ ಪ್ರಯಾಣಕ್ಕೆ ಅಧಿಕಾರಿಗಳು ಸಕಲ ವ್ಯವಸ್ಥೆಯನ್ನು ಮಾಡಿದ್ದು ಸಂಪೂರ್ಣವಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದು ನಮಗೆ ಧನ್ಯತಾ ಅನುಭವ ನೀಡಿದೆ. ಮತ್ತು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ ಹಾಕಿದ್ದಕ್ಕೆ ಸಾರ್ಥಕ ಮನೋಭಾವ ತಂದಿದೆ ಎಂದು ಯಾತ್ರೆಯ ರೂವಾರಿ ಪ್ರಕಾಶ್ ಭಟ್ ರವರು ಭಾವನಾತ್ಮಕ ನುಡಿಗಳಿಂದ ವಿಡಿಯೋ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


 ಸಕಲ ವ್ಯವಸ್ಥೆಯನ್ನು ಮಾಡಿರುವ ಮತ್ತು ಪ್ರತಿ ಬಾರಿಯೂ ದೂರವಾಣಿ ಮೂಲಕ ಯೋಗ ಕ್ಷೇಮ ವಿಚಾರಿಸುತ್ತಿದ್ದ ಸಂಸದರು ಹಾಗೂ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ರೈಲ್ವೆ ಸಚಿವರಿಗೆ ಮನದಾಳದ ಅಭಿನಂದನೆಗಳು ಎಂದು ಯಾತ್ರಾರ್ತಿಗಳಲ್ಲಿ ಅನೇಕರು ವಿಡಿಯೋ ಮೂಲಕ ಧನ್ಯವಾದಗಳು ಅರ್ಪಿಸಿದ್ದಾರೆ. ಸಂಸದರ ಈ ಕಾರ್ಯ ನಾಡಿನೆಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಸಂಸದರೇ ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೇ ಖಾತೆ ಸಚಿವ ವಿ ಸೋಮಣ್ಣ ಹಾಗೂ ರೈಲ್ವೆ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

Post a Comment

0 Comments