ಹೊಸಬೆಟ್ಟು ಗ್ರಾಮಸಭೆ *ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗೆ ಗ್ರಾಮಸ್ಥರ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 ಹೊಸಬೆಟ್ಟು ಗ್ರಾಮಸಭೆ


*ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗೆ ಗ್ರಾಮಸ್ಥರ ಆಗ್ರಹ

ಮೂಡುಬಿದಿರೆ: ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಇಲ್ಲಿಗೆ ಪೂರ್ಣ ಪ್ರಮಾಣದ ವೈದ್ಯಾಧಿಕಾರಿಯನ್ನು ಒದಗಿಸುವಂತೆ ಹೊಸಬೆಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.


 ಪಂಚಾಯತ್ ಅಧ್ಯಕ್ಷೆ ಸೌಮ್ಯ ಸದಾಶಿವ ಪೂಜಾರಿ ಅಧ್ಯಕ್ಷತೆಯಲ್ಲಿ ಹೊಸಬೆಟ್ಟು ಹೋಲಿ ಕ್ರಾಸ್ ಚಚ್ ೯ ಸಭಾಂಗಣದಲ್ಲಿ ನಡೆದ ಹೊಸಬೆಟ್ಟು ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರೋರ್ವರು ಮಾತನಾಡಿ ತಮ್ಮ ಸಂಬಂಧಿಕರೋರ್ವರು ತೀರಿಕೊಂಡ ಸಂದರ್ಭದಲ್ಲಿ ಕುಪ್ಪೆ ಪದವು ಮತ್ತು ಮೂಡುಬಿದಿರೆಯಲ್ಲಿ ವೈದ್ಯಾಧಿಕಾರಿಗಳಿಲ್ಲದೆ ಪೋಸ್ಟ್ ಮಾರ್ಟಮ್  ಮಾಡಲು ವಿಳಂಬವಾಗಿರುವುದರ ಬಗ್ಗೆ ಪ್ರಭಾರ ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್ ಅವರ ಗಮನಕ್ಕೆ ತಂದರು.

  ಆ ದಿನ ಎಲ್ಲಾ ಡಾಕ್ಟರ್ಸ್ ಗೆ ತರಬೇತಿ ಇದ್ದುದರಿಂದ ಶವ ಪರೀಕ್ಷೆ ಮಾಡುವುದು ವಿಳಂಬವಾಗಿದೆ. ಮೂಡುಬಿದಿರೆ ಮತ್ತು ಕುಪ್ಪೆಪದವಿನಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದ್ದುದರಿಂದ ಸಮಸ್ಯೆಯಾಗಿದೆ. ವೈದ್ಯಾಧಿಕಾರಿಗಳು ಬೇಕೆಂದು ನಾವು ಈಗಾಗಲೇ ಪ್ರಕಟನೆಯನ್ನು ಹೊರಡಿಸಿದ್ದೇವೆ ಆದರೆ ಯಾರೂ ಬರದೆ ಇದ್ದುದರಿಂದ ಸಮಸ್ಯೆಗಳು ಉದ್ಭವಿಸಿವೆ ಎಂದಾಗ ಗ್ರಾಮಸ್ಥರು  ವೈದ್ಯಾಧಿಕಾರಿಗಳು ಬೇಕೇಬೇಕು ಎಂದಾಗ ಗ್ರಾಮಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.


  ಹೊಸಬೆಟ್ಟು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾತನಾಡಿ ಶಾಲೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಕಷ್ಟವಾಗುತ್ತಿದೆ. ಶಾಲೆಯ ಅಡಿಗೆ ಕೋಣೆಯು ಸೋರುತ್ತಿದ್ದು ಇದನ್ನು ಪಂಚಾಯತ್ ವತಿಯಿಂದ ಸರಿಮಾಡಿಕೊಡುವಂತೆ ಮನವಿ ಮಾಡಿದರು. ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಇದ್ದಾರೆ ಹೆತ್ತವರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳಿಸುವಂತೆ ಅವರು ಕೇಳಿಕೊಂಡರು. 


  ಮಂಗಗಳ ಹಾವಳಿಯಿಂದಾಗಿ ರೈತರ ಬೆಳೆಗೆ ಹಾನಿಯಾಗುತ್ತಿದೆ ಇದಕ್ಕೆ ಇಲಾಖೆಯಿಂದ ಯಾವ ಕ್ರಮವನ್ನು ಕೈಗೊಳ್ಳುತ್ತೀರೆಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

  ಮಂಗಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮಂಕಿಪಾಕ್೯ ನಿರ್ಮಿಸುವಂತೆ ಮತ್ತು ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆಯನ್ನು ಮಾಡುವ. ಬಗ್ಗೆ ಸರಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳುವ ಯೋಜನೆಯಿದೆ ಮತ್ತು ಬೆಳೆ ಹಾನಿಯಾಗಿದ್ದರೆ ರೈತರು ಇಲಾಖೆಗೆ ಮನವಿ ನೀಡುವಂತೆ ತಿಳಿಸಿದ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಅವರು ಮಂಗಗಳನ್ನು ಕಾಡಿನಲ್ಲಿಯೇ ಉಳಿಸುವಂತೆ ಮಾಡುವ ನಿಟ್ಟಿನಲ್ಲಿ ಕಾಡಿನ ಮಧ್ಯದಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.

  ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದರಿಂದ ಕಸದ ರಾಶಿ ರಸ್ತೆಗಳ ಬದಿಗಳಲ್ಲಿ ಬೀಳುತ್ತಿದ್ದು ವಾಸನೆ ಬೀರುತ್ತಿದೆ ಎಂದು ಗ್ರಾಮಸ್ಥರು ಗಮನ ಸೆಳೆದರು. ತ್ಯಾಜ್ಯ ವಿಲೇವಾರಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಿವೇಶನ ಮಂಜೂರು ಆಗಿ ಕಾಮಗಾರಿ ಹಂತದಲ್ಲಿ ಅರಣ್ಯ ಇಲಾಖೆಯ ತಡೆ ಬಂದಿದ್ದರಿಂದ  ಚರ್ಚೆ ಜಂಟಿ ಸಮೀಕ್ಷೆಗೆ ಒಂದು ವರ್ಷದಿಂದ ಕಾಯುವ ಪರಿಸ್ಥಿತಿ ಬಂದಿದೆ ಎಂದು ಪ್ರಭಾರ ಪಿಡಿಒ ಶೇಖರ್ ಅವರು ಗ್ರಾಮಸ್ಥರಿಗೆ ತಿಳಿಸಿದರು.

   ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿರುವ ಟಿಸಿಯ ತಂತಿಯು ತುಂಬಾ ಹಳೆಯದಾಗಿದ್ದು ಅದನ್ನು ತೆಗೆದು ಹೊಸ ತಂತಿಯನ್ನು ಅಳವಡಿಸುವಂತೆ, ಟೆಲ್ಲಿಸ್ ನಗರ ರಸ್ತೆಯ ಬಳಿ ಇರುವ ಟಿಸಿ ಅಪಾಯಕಾರಿಯಾಗಿದ್ದು ಅದನ್ನು ಸ್ಥಳಾಂತರಗೊಳಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಪಂಚಾಯತ್ ನಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಕೊರೆದ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ಹೊಸ ಟಿಸಿಗಾಗಿ ಹಣ ಪಾವತಿಸುವುದು ಪಂಚಾಯತ್ ನಲ್ಲಿ ಕಷ್ಟಸಾಧ್ಯವಾದದರಿಂದ ಸರಕಾರವೇ ಭರಿಸಬೇಕೆಂದು ಸಭೆಯು ನಿರ್ಣಯಿಸಿತು.

  ಅರಣ್ಯ ವಾಸಿಗಳ ಹಕ್ಕು ಕಾಯ್ದೆ ಅನ್ವಯ ಮೀಸಲಿಟ್ಟ ಅರಣ್ಯ ಜಾಗದ ಬಗ್ಗೆ ಜಂಟಿ ಸರ್ವೆಯ ಬಗ್ಗೆ ಸಹಾಯಕ ನಿರ್ದೇಶಕರು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇವರಿಗೆ ಪತ್ರ ಬರೆಯುವುದೆಂದು ನಿರ್ಣಯಿಸಲಾಯಿತು.

ಕೃಷಿ ಇಲಾಖೆಯ ಕೃಷಿ ನಿರ್ದೇಶಕರು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

  ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

 ಉಪಾಧ್ಯಕ್ಷೆ ಬೇಬಿ ಮತ್ತು ಸದಸ್ಯರು ಚರ್ಚೆಯಲ್ಲಿ ಪಾಲ್ಹೊಂಡಿದ್ದರು. ಸಿಬಂದಿ ಸಂಜೀವ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.

Post a Comment

0 Comments