ಮೂಡುಬಿದಿರೆಯಲ್ಲಿ ನಾಳೆ ವಾಹನ ಸಂಚಾರ ಬದಲಾವಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ನಾಳೆ ವಾಹನ ಸಂಚಾರ ಬದಲಾವಣೆ

ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಸಮಾಜ ಮಂದಿರದಲ್ಲಿ   ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ 61 ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ನಾಳೆ ನಡೆಯಲ್ಲಿರುವ ಶೋಭಾಯಾತ್ರೆಯ ಅಂಗವಾಗಿ  ನಾಳೆ  ಮಧ್ಯಾಹ್ನ 1 ಗಂಟೆಯಿಂದ ವಾಹನ ಸಂಚಾರದಲ್ಲಿ ಬದಲಾವಣೆಯಿದೆ ಎಂದು ಪೊಲೀಸ್ ನಿರೀಕ್ಷಕ ಸಂದೇಶ ಪಿ.ಜಿ.ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 ಉತ್ಸವದಂಗವಾಗಿ  ಮೆರವಣಿಗೆ ಇದ್ದು ಮೂಡುಬಿದಿರೆ ಪೇಟೆಯಲ್ಲಿ ಜನರು ಸೇರುವುದರಿಂದ ವಾಹನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ವಾಹನದ ಮೂಲಕ ಸಮಯ ಮಧ್ಯಾಹ್ನ 12.00 ಗಂಟೆಯ ನಂತರ ಮೂಡುಬಿದಿರೆ ನಗರಕ್ಕೆ ಬಾರದೇ  ಹೊರ ವರ್ತುಲಾ (ಬೈಪಾಸ್) ರಸ್ತೆಯಲ್ಲಿ ಹಾಗೂ ಬದಲಿ ಮಾರ್ಗದಲ್ಲಿ ಮೆರವಣಿಗೆಯು ಮುಗಿಯುವ ವರೆಗೂ ಸಂಚರಿಸುವುದು ಮತ್ತು ಬೆಳಿಗ್ಗೆ ಸಮಯ 06.00 ಗಂಟೆಯಿಂದ ಮೆರವಣಿಗೆ ಕಾರ್ಯಕ್ರಮ ಮುಗಿಯುವವರೆಗೂ ಮೂಡುಬಿದಿರೆ ಪೇಟೆಯ ರಸ್ತೆಯ ಬದಿಯಲ್ಲಿ ವಾಹನವನ್ನು ಪಾರ್ಕಿಂಗ್ ಮಾಡದಿರುವುದು ಮಾಡಿದ್ದಲ್ಲಿ ಟೋಯಿಂಗ್ ವಾಹನದ ಮುಖಾಂತರ ಟೋಯಿಂಗ್ ಮಾಡಲಾಗುವುದು, ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments