ಸಮಾಜ ಮಂದಿರ ಸಭಾದಿಂದ ಮೂಡುಬಿದಿರೆ ಠಾಣೆಗೆ ಬ್ಯಾರಿಕೇಡ್ ಕೊಡುಗೆ
ಮೂಡುಬಿದಿರೆ : ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ ಪೊಲೀಸ್ ಠಾಣೆಗೆ ಕೊಡುಗೆಯಾಗಿ ನೀಡುವ ರೂ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಹತ್ತು ಬ್ಯಾರಿಕೇಡ್ ಗಳನ್ನು ಬುಧವಾರ ಸಂಜೆ ಸಮಾಜ ಮಂದಿರದ ಆವರಣದಲ್ಲಿ ಹಸ್ತಾಂತರಿಸಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ.ಅವರಿಗೆ ಬ್ಯಾರಿಕೇಡ್ ಹಸ್ತಾಂತರಿಸಿ ಮಾತನಾಡಿ ಟ್ರಾಫಿಕ್ ಸಮಸ್ಯೆ ನಿವಾರಣೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪೊಲೀಸರಿಗೆ ಅನುಕೂಲವಾಗಲೆಂದು ಬ್ಯಾರಿಕೇಡ್ ನೀಡಿರುವುದಾಗಿ ತಿಳಿಸಿದರು.
ಸಂದೇಶ್ ಪಿ. ಜಿ.ಅವರು ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಗಳ ಅವಶ್ಯಕತೆಯಿತ್ತು ಇದನ್ನು ಮನಗಂಡು ನಾವು ಅಭಯಚಂದ್ರರಲ್ಲಿ ಮನವಿ ಮಾಡಿದ್ದೆವು. ಇದೀಗ ಸಮಾಜ ಮಂದಿರದ ವತಿಯಿಂದ ನೀಡಿರುವ ಬ್ಯಾರಿಕೇಡ್ ನಿಂದ ಅನುಕೂಲವಾಗಲಿದೆ. ಅಗತ್ಯವಾಗಿ ಅತಿಯಾದ ಮಳೆ, ನೆರೆಯಂತಹ ಅಪಾಯಕಾರಿ ಸನ್ನಿವೇಶ ಎದುರಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.
ಸಮಾಜ ಮಂದಿರ ಸಭಾ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಹೆಚ್ ಸುರೇಶ್ ಪ್ರಭು, ಜತೆ ಕಾರ್ಯದರ್ಶಿ ಗಣೇಶ್ ಕಾಮತ್, ಸದಸ್ಯರಾದ ಜಯರಾಜ್ ಕಾಂಬ್ಳಿ, ಅಬ್ದುಲ್ ಗಫೂರ್, ರಾಮ್ ಪ್ರಸಾದ್, ಎಂ. ಎಸ್. ಕೋಟ್ಯಾನ್, ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ, ಎ ಎಸ್. ಐ. ರಾಜೇಶ್, ಸಿಬ್ಬಂದಿ ಉಮೇಶ್ ಉಪಸ್ಥಿತರಿದ್ದರು.
0 Comments