ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ನ 42ನೇ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ
ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 42 ನೇ ಸೇವಾ ಯೋಜನೆಯ ಅಂಗವಾಗಿ ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಲೂಕಿನ ಪಡುಮಾರ್ನಾಡ್ ಗ್ರಾಮದ ಗುಂಡುಕಲ್ಲಿನ ಶೋಭಾ ಪೂಜಾರಿ ಎಂಬವರಿಗೆ ಸೆಪ್ಟೆಂಬರ್ ತಿಂಗಳ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಶೋಭಾ ಅವರ ಪತಿ ತೋಟದ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು. ಆದರೆ ಈಗ ಹೆಂಡತಿಯನ್ನು ನೋಡಿಕೊಳ್ಳಲು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇವರಿಗೆ ಶಾಲೆಗೆ ಹೋಗುವ 2ಚಿಕ್ಕ ಮಕ್ಕಳಿದ್ದಾರೆ.
ಈಗಾಗಲೇ 5ಲಕ್ಷ ದ ವರೆಗೆ ಸಾಲ ಮಾಡಿ ಆಸ್ಪತ್ರೆ ವೆಚ್ಚ ಭರಿಸಿದ್ದಾರೆ ಇವರ ದೈನಂದಿನ ಖರ್ಚು ಹಾಗೂ ಆಸ್ಪತ್ರೆಯ ಮುಂದಿನ
ಖರ್ಚು ತುಂಬಾ ಇದ್ದು ಜೀವನ ಸಾಗಿಸಲು ಕಷ್ಟ ಪಡುತ್ತಿರುವುದನ್ನು ಕಂಡ ಸಾಯಿ ಮಾರ್ನಾಡ್ ತಂಡವು ಸಹಾಯಧನವನ್ನು ನೀಡುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದೆ.
0 Comments