ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 10 ನೇ ವಾರ್ಷಿಕ ಮಹಾಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 10 ನೇ ವಾರ್ಷಿಕ ಮಹಾಸಭೆ

*ಉತ್ತಮ ಗ್ರಾಹಕರಿಗೆ ಸನ್ಮಾನ 


ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ಮೂಡುಬಿದಿರೆ ಇದರ 10 ನೇ ವಾರ್ಷಿಕ ಮಹಾಸಭೆಯು ಸಮಾಜ ಮಂದಿರದಲ್ಲಿ ನಡೆಯಿತು.


 ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ ಅವರು  ಅಧ್ಯಕ್ಷತೆ ವಹಿಸಿ  ಸಭೆಯಲ್ಲಿ 6 ಜನ ಉತ್ತಮ ಗ್ರಾಹಕರನ್ನು ಹಾಗೂ ಒಂದು ವರ್ಷದಲ್ಲಿ ಹೆಚ್ಚು ಪಿಗ್ಮಿ ಸಂಗ್ರಾಹಣೆ ಮಾಡಿದ ಪಿಗ್ಮಿ ಸಂಗ್ರಾಹಕ ದಿನೇಶ್ ಪೂಜಾರಿ ಅವರನ್ನು ಸನ್ಮಾನಿಸಿದರು.


ನಂತರ  ರಂಜಿತ್ ಪೂಜಾರಿ ಅವರು ಮಾತನಾಡಿ ಸಹಕಾರಿಗೆ ಸುಮಾರು 80 ಲಕ್ಷದ ಸ್ವಂತಕಟ್ಟಡ ಖರೀದಿಸಿ ಈ ಬಾರಿ12% ಡಿವಿಡೆಂಡ್ ನೀಡುವುದೆಂದು ತಿಳಿಸಿದರು.

 A+ ಗ್ರೇಡ್ ಬಂದ 19 ಸ್ವಸಹಾಯ ತಂಡದ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರನ್ನು ಗುರುತಿಸಲಾಯಿತು.


 ಸಭೆಯಲ್ಲಿ ನಿರ್ದೇಶಕರಾದ ಸುರೇಶ್ ಪೂಜಾರಿ ಎಂ, ಗೋಪಾಲ್ ಶೆಟ್ಟಿಗಾರ್,  ಶರತ್ ಜೆ ಶೆಟ್ಟಿ, ರವೀಂದ್ರ ಕರ್ಕೇರ, ನಾಗೇಶ್ ನಾಯ್ಕ,  ಶಂಕರ ನಾರಾಯಣ ಭಟ್,  ಮೀನಾಕ್ಷಿ ಎಸ್.ಅಂಚನ್ ಉಪಸ್ಥಿತರಿದ್ದರು.

ನಿರ್ದೇಶಕರಾದ ರಮೇಶ್‌ ಎಸ್ ಶೆಟ್ಟಿಯವರು ಸ್ವಾಗತಿಸಿದರು. ಸಹಕಾರಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಯು.ರಾಜಶೇಖರ ಮಧ್ಯಸ್ಥ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಗಣೇಶ್ 2023-24 ನೇ ಸಾಲಿನ ಲೆಕ್ಕ ಪತ್ರಗಳನ್ನು ಮಂಡಿಸಿದರು. ಸ್ವಾತಿ 2023-24 ನೇ ಸಾಲಿನ ಬಜೆಟ್‌ಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಜೂರಾತಿ ಮಂಡಿಸಿದರು.  ಪ್ರತಿಭಾ 2024-25 ನೇ ಸಾಲಿನ ಬಜೆಟ್ ಮಂಡಿಸಿದರು. ನಿರ್ದೇಶಕರಾದ ರಾಜೇಂದ್ರ ಬಿ ರವರು ಲಾಭಾಂಶ ವಿಂಗಡನೆ ಮಂಡಿಸಿದರು. ರತ್ನಾಕರ ಪೂಜಾರಿ ಅವರು ಉತ್ತಮ ಸಂಘಗಳ ಹೆಸರುಗಳನ್ನು ಓದಿ ಹೇಳಿದರು. ಶಂಕರನಾರಾಯಣ ಭಟ್‌ರವರು ಲೆಕ್ಕ ಪರಿಶೋಧನೆಯ ಪಾಲನಾ ವರದಿ ಮಂಡಿಸಿದರು.  ಉಷಾ ವಂದಿಸಿದರು.

Post a Comment

0 Comments