ಮೂಡುಬಿದಿರೆ: ಮುಖ್ಯಮಂತ್ರಿ ಪದಕಕ್ಕೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಭಾಜನರಾಗಿದ್ದಾರೆ.
ಪೊಲೀಸ್ ಇಲಾಖೆಯ ದಕ್ಷ ಸೇವೆಗಾಗಿ ನೀಡಲ್ಪಡುವ ಈ ಪದಕವು ರಾಜ್ಯದ ಸುಮಾರು 126 ಮಂದಿ ಪೊಲೀಸ್ ಅಧಿಕಾರಿಗಳಿಗೆ ದೊರಕಲಿದ್ದು ಸಂದೇಶ್ ಪಿ.ಜಿ.ಅವರಿಗೂ ಲಭಿಸಲಿದೆ.
ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಸಂದೇಶ್ ಅವರು ತಮ್ಮ ಡೇರಿಂಗ್ ಮೂಲಕ ನಿಷ್ಠಾವಂತ ಅಧಿಕಾರಿಯಾಗಿ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನಸೆಳೆದಿದ್ದಾರೆ.
ಪ್ರಸ್ತುತ ಅವರು ಮೂಡುಬಿದಿರೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
0 Comments