ಜೈನ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಮೃದ್ಧ ಭಾರತದ ಕನಸು ನನಸಾಗಲಿ: ಡಾ.ಪ್ರಭಾತ್ ಬಲ್ನಾಡು

ಜಾಹೀರಾತು/Advertisment
ಜಾಹೀರಾತು/Advertisment

 ಜೈನ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ

ಸಮೃದ್ಧ ಭಾರತದ ಕನಸು ನನಸಾಗಲಿ: ಡಾ.ಪ್ರಭಾತ್ ಬಲ್ನಾಡು

ಮೂಡುಬಿದಿರೆ: ಜೈನ ಪದವಿಪೂರ್ವ ಕಾಲೇಜಿನಲ್ಲಿ 78ನೇಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ  ಪ್ರಾಂಶುಪಾಲ  ಡಾ. ಪ್ರಭಾತ್ ಬಲ್ನಾಡು ಅವರು ಧ್ವಜಾರೋಹಣಗೈದು ಮಾತನಾಡಿ

ಸಮೃದ್ಧ ಭಾರತದ ಕನಸು ನನಸಾಗಲಿ

ಆ ಮೂಲಕ ತ್ಯಾಗ ಬಲಿದಾನಗಳ ಹಿಂದಿನ  ನಿರೀಕ್ಷೆಗಳು ಫಲ ನೀಡಲಿ ಎಂಬುದಾಗಿ  ಸಂದೇಶವನ್ನು ನೀಡಿದರು. 

 ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಚೇತನ ರಾಜೇಂದ್ರ ಹೆಗಡೆ ಅವರು  ಸ್ವಾತಂತ್ರ್ಯ ಪಡೆದು 77 ವರ್ಷಗಳು ಕಳೆದ ಈ ಸಂದರ್ಭದಲ್ಲಿ ನೈತಿಕ ಮೌಲ್ಯಗಳ ಅಧಪತನದತ್ತ ವಿದ್ಯಾರ್ಥಿಗಳ ಗಮನ ಸೆಳೆದರು. ಭವ್ಯ ಭಾರತದ ಮುಂದಿನ ಪ್ರಜೆಗಳಾಗಿರುವ ವಿದ್ಯಾರ್ಥಿಗಳು ತಮ್ಮ  ಅಂತ ಸತ್ವವನ್ನು ವೃದ್ಧಿಸಿಕೊಂಡು ಒಬ್ಬ ಉತ್ತಮ ಪ್ರಜೆಯಾಗಬೇಕು. ಗುರು ಹಿರಿಯರಿಗೆ ಗೌರವವನ್ನು ನೀಡುವುದರ ಮೂಲಕವಾಗಿಯೇ ಸಾಧನೆಗೆ ಅಡಿಗಲ್ಲು ಹಾಕಬೇಕೆಂದು ಕರೆ ನೀಡಿದರು .


ಕಾಲೇಜಿನ ಪ್ರಾಂಶುಪಾಲ ಅಧ್ಯಕ್ಷತೆ ವಹಿಸಿದ್ದರು. ನಶಾ ಮುಕ್ತ ಭಾರತದ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು 


.ಭಾಷಣ ಚಿತ್ರಕಲೆ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.  

ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post a Comment

0 Comments