ಮೂಡುಬಿದಿರೆ ಪುರಸಭೆಯಿಂದ ಸ್ವಾತಂತ್ರ್ಯ ದಿನ ಆಚರಣೆ
ಮೂಡುಬಿದಿರೆ: ಇಲ್ಲಿನ ಪುರಸಭೆಯಲ್ಲಿ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಧ್ವಜವನ್ನು ಅರಳಿಸುವ ಮೂಲಕ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮೂಡಾ ಅದ್ಯಕ್ಷ ಹರ್ಷವರ್ಧನ್ ಪಡಿವಾಳ್, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪುರಂದರ ದೇವಾಡಿಗ,ಸುರೇಶ್ ಪ್ರಭು, ಸುಜಾತ ಶಶಿಕಿರಣ್, ದಿವ್ಯ ಜಗದೀಶ್, ಸೌಮ್ಯ ಸಂದೀಪ್ ಶೆಟ್ಟಿ, ಸುಧೀಶ್ ಹೆಗ್ಡೆ ಸಹಿತ ಪುರಸಭಾ ಸಿಬಂಧಿ ವರ್ಗ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಮುಖ್ಯಾಧಿಕಾರಿ ಇಂದು ಎಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಂದಾಯ ಅಧಿಕಾರಿ ಜ್ಯೋತಿ ವಂದಿಸಿದರು.
0 Comments