ಪ್ರೇಯಸಿಗೆ ಕತ್ತರಿಯಿಂದ ಇರಿದ ಪ್ರಿಯತಮ

ಜಾಹೀರಾತು/Advertisment
ಜಾಹೀರಾತು/Advertisment

 ಪ್ರೇಯಸಿಗೆ ಕತ್ತರಿಯಿಂದ ಇರಿದ ಪ್ರಿಯತಮ

ಮೂಡುಬಿದಿರೆ: ಪ್ರೇಯಸಿ ಮೊಬೈಲ್ ಕರೆಯನ್ನು ಸ್ವೀಕರಿಸದೆ ತನ್ನನ್ನು  ನಿರ್ಲಕ್ಷಿಸುತ್ತಿರುವ ಬಗ್ಗೆ ವಿಚಲಿತನಾದ  ಯುವಕನೋರ್ವ ವಿದ್ಯಾರ್ಥಿನಿಗೆ ಕಾಲೇಜಿನಲ್ಲಿ ಕತ್ತರಿಯಿಂದ ಇರಿದು ಗಾಯಗೊಳಿಸಿದ ಘಟನೆ ಆಳ್ವಾಸ್ ಕಾಲೇಜಿನಲ್ಲಿ ಸೋಮವಾರ ನಡೆದಿದೆ.

 

  ತುಮಕೂರು ಮೂಲದ, ಆಳ್ವಾಸ್ ಕಾಲೇಜಿನ   ವಿದ್ಯಾರ್ಥಿನಿ ಭೂಮಿಕಾ ಗಾಯಗೊಂಡವಳು.  ತುಮಕೂರು ಮೂಲದ ಮಂಜುನಾಥ ಈ ಪ್ರಕರಣದ ಆರೋಪಿಯಾಗಿದ್ದಾನೆ.

 ಇವರಿಬ್ಬರೂ ಪಿಯುಸಿ ವರೆಗೆ ಕ್ಲಾಸ್ ಮೇಟ್ ಆಗಿದ್ದು ಈ ಸಂದರ್ಭ ಇಬ್ಬರ ನಡುವೆ ಲವ್ ಇತ್ತೆನ್ನಲಾಗಿದೆ. ಬಳಿಕ ಮಂಜುನಾಥ ಕಾಲೇಜು ಬಿಟ್ಟಿದ್ದು ಭೂಮಿಕಾ ಕಾಲೇಜು ಮುಂದುವರಿಸಿದ್ದಳು. ಇವರಿಬ್ಬರ ನಡುವಿನ ಪ್ರೇಮದ ಬಗ್ಗೆ ಮನೆಮಂದಿಗೆ ಗೊತ್ತಾಗಿ ಆಕೆಯಿಂದ ಮೊಬೈಲ್ ತೆಗೆದುಕೊಂಡಿದ್ದರೆನ್ನಲಾಗಿದೆ. ಹೀಗಾಗಿ ಸಂಪರ್ಕ ಇರಲಿಲ್ಲ. ಇದರಿಂದ ಕುಪಿತನಾದ  ಮಂಜುನಾಥ ಎರಡು ದಿನಗಳ ಹಿಂದೆ ಮೂಡುಬಿದಿರೆಗೆ ಬಂದು ಲಾಡ್ಜಲ್ಲಿ ತಂಗಿದ್ದಾನೆ. ಸೋಮವಾರ ಬೆಳಿಗ್ಗೆ ಭೂಮಿಕಾಳ ಕ್ಲಾಸ್ ಗೆ ಕತ್ತರಿಯೊಂದಿಗೆ ನುಗ್ಗಿದ ಮಂಜುನಾಥ ಆಕೆಗೆ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಗಾಯಗೊಂಡ ಭೂಮಿಕಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ‌. ಅವರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Post a Comment

0 Comments