29 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿದ ಮೂಡುಬಿದಿರೆ ಪೊಲೀಸರ ತಂಡ
ಮೂಡುಬಿದಿರೆ: ಕಳೆದ 29 ವರ್ಷಗಳ ಹಿಂದೆಗಳ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅವರ ತಂಡವು ಬಂಧಿಸಿದೆ.
ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಒಂಟಿಕಟ್ಟೆ ಹರೀಶ್ ಪೂಜಾರಿ (57ವ) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಮಹಾಬಲ ಪೂಜಾರಿ, ಸತೀಶ್ ಪೂಜಾರಿ ಎಂಬವರು 29ವರ್ಷಗಳ ಹಿಂದೆ ಮನೆಯಲ್ಲಿ ರಾತ್ರಿ ಗಾರೆ ಕೆಲಸ ಮಾಡುತ್ತಿದ್ದಾಗ ಹರೀಶ್ ಪೂಜಾರಿ ಹಲ್ಲೆ ನಡೆಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.
ಆರೋಪಿಯು ಕೋಟೆಬಾಗಿಲು ಬಳಿ ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 Comments