ಬೆಳುವಾಯಿ: 10ರಂದು ರೋಟರಿಯಿಂದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ‘ವಿಸ್ತಾರ’
ಮೂಡುಬಿದಿರೆ: ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಮೀಸಲಾದ ರೋಟರಿಯ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ರೋಟರಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ‘ವಿಸ್ತಾರ- ೨೦೨೪’ ಆ.೧೦ರಂದು ಶನಿವಾರ ಸಂಜೆ ೪ರಿಂದ ಬೆಳುವಾಯಿ ಖಂಡಿಗ ಗ್ರೀನ್ಸ್ ಮಲ್ಟಿಪರ್ಪಸ್ ಹಾಲ್‌ನಲ್ಲಿ ನಡೆಯಲಿದೆ ಎಂದು ರೋಟರಿ ಜಿಲ್ಲೆ ೩೧೮೧ರ ಗವರ‍್ನರ್ ರೊ. ವಿಕ್ರಮ ದತ್ತ ಹೇಳಿದರು.
ಅವರು ಬುಧವಾರ ರೋಟರಿ ಶಾಲೆಯ ಸಮ್ಮಿಲನ್ ಹಾಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿಯ ಸದಸ್ಯತನ ಅಭಿವೃದ್ಧಿ, ಕಾಯ್ದುಕೊಳ್ಳುವಿಕೆ, ಕ್ಲಬ್ ವಿಸ್ತರಣೆ ಮತ್ತು ಸಾರ್ವಜನಿಕ ಸಂಪರ್ಕವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೋಟರಿ ಜಿಲ್ಲೆ ೩೧೮೧ರ ವಲಯ ೧ ರಿಂದ ೫ ರ ಈ ಜಿಲ್ಲಾ ಸೆಮಿನಾರ್ ‘ವಿಸ್ತಾರ’ ನಡೆಯಲಿದ್ದು ಇದರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು, ಸುಳ್ಯ ತಾಲೂಕು ವ್ಯಾಪ್ತಿಯ ರೋಟರಿ ಕ್ಲಬ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ರೋಟರಿ ವಲಯ ೭ರ ಕೋಆರ್ಡಿನೇಟರ್ ರೊ.ಡಾ. ದೀಪಕ್ ಪುರೋಹಿತ್ ದಿಕ್ಸೂಚಿ ಭಾಷಣ ಮಾಡುವರು.
ಆತಿಥೇಯ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ರೊ. ರವಿಪ್ರಸಾದ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ರೋಟರಿ ಜಿಲ್ಲೆಗಳ ಮಾಜಿ ಗವರ್ನರ್‌ಗಳಾದ ರೊ. ಗೋಪಿನಾಥ್, ರೋ. ಕೆ ಮುನಿ ಗಿರೀಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಡುಬಿದಿರೆ ರೋಟರಿ ಅಧ್ಯಕ್ಷ ರೊ. ರವಿಪ್ರಸಾದ್ ಉಪಾಧ್ಯಾಯ, ಕಾರ್ಯದರ್ಶಿ ರತ್ನಾಕರ್ ಜೈನ್, ರೋಟರಿ ಜಿಲ್ಲಾ ಆಡಳಿತ ಕಾರ್ಯದರ್ಶಿ ರೊ. ರಿತೇಶ್ ಬಾಳಿಗಾ, ಅಸಿಸ್ಟೆಂಟ್ ಗವರ‍್ನರ್ ಡಾ. ಮುರಳೀಕೃಷ್ಣ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಡಾ. ಹರೀಶ್ ನಾಯಕ್, ಉಪಾಧ್ಯಕ್ಷ ಬಾಹುಬಲಿ ಪ್ರಸಾದ್, ಸಲಹಾ ಸಮಿತಿಯ ಸದಸ್ಯರು ಇದ್ದರು.
0 Comments