ಕಡಂದಲೆ ದೈವಸ್ಥಾನ ಹಾಗೂ ಮನೆ ಮೇಲೆ ಮರ ಬಿದ್ದು ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 ಕಡಂದಲೆ ದೈವಸ್ಥಾನ ಹಾಗೂ ಮನೆ ಮೇಲೆ ಮರ ಬಿದ್ದು ಹಾನಿ 

ಮೂಡುಬಿದಿರೆ : ಸೋಮವಾರ ಸುರಿದ ಭಾರೀ ಗಾಳಿ ಮಳೆಗೆ ಕಡಂದಲೆ ಗ್ರಾಮ ವ್ಯಾಪ್ತಿಯ ಕೆ.ಬಿ. ಕೃಷ್ಣ ಮೂರ್ತಿ ಭಟ್ ಎಂಬವರ ಜೋಡಿಕಟ್ಟೆ ಬಡಗಬೆಟ್ಟು ಎಂಬಲ್ಲಿ ದೈವಸ್ಥಾನದ ಮೇಲೆ ಮರ ಬಿದ್ದು ಹಾನಿ ಆಗಿದೆ. 


ಮರ ಬಿದ್ದ ರಭಸಕ್ಕೆ ಎರಡು ವಿದ್ಯುತ್ ಕಂಬ ತುಂಡಾಗಿ ರಸ್ತೆ ಮೇಲೆ ಬಿದ್ದಿದೆ. ಜಾನ್ ಫೆರ್ನಾಂಡಿಸ್ ಜೋಡಿಕಟ್ಟೆ ಮುದಲಗಡಿ ಎಂಬವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಆಗಿದೆ.


ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್,  ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಜಗದೀಶ್ ಕಲ್ಲೋಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಕ್ಷಿತಾ ಡಿ., ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ಉಗ್ರಣಿ ರಿತೇಶ್  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Post a Comment

0 Comments