ನಿಧನ: ಗಿರಿಯ ಬೋವಿ
ಮೂಡುಬಿದಿರೆ: ಇಲ್ಲಿನ ಬೋವಿ ಸಮಾಜದ ಹಿರಿಯರಾಗಿದ್ದ ಗಿರಿಯ ಬೋವಿ( 88ವ) ಅಲ್ಪ ಕಾಲದ ಅಸೌಖ್ಯದಿಂದ ಜು 21 ರಂದು ಬೋವಿ ಕೇರಿಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.
ಹಲವು ದಶಕಗಳಿಂದ ಪುರಾತನ ಆದಿಶಕ್ತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿದ್ದ ಅವರು ಪುರಾತನ ದೇವಾಲಯದ ಜೀರ್ಣೋದ್ದಾರ ಸಹಿತ ಬೋವಿಕೇರಿಯಲ್ಲಿನ ಸಮಾಜದ ನಾಗಾಲಯದ ಅಭಿವೃದ್ಧಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. ಧಾರ್ಮಿಕ, ಪರೋಪಕಾರ ಮನೋಭಾವದ ಅವರು ಬೋವಿ ಸಮಾಜದ ಪರಂಪರೆಯ ಹಿರಿಯ ಕೊಂಡಿಯಂತಿದ್ದರು.
ಅಲ್ಪಕಾಲ ಮುಂಬೈನಲ್ಲೂ ಉದ್ಯೋಗದಲ್ಲಿದ್ದು ಬಳಿಕ ಊರಿಗೆ ಮರಳಿ ಹೊಟೇಲ್ ಉದ್ಯಮ, ವರ್ತಕರಾಗಿಯೂ ಶ್ರಮಿಸಿದ್ದರು.
ಅವರು ಪೋಲೀಸ್ ಇಲಾಖೆಯಲ್ಲಿರುವ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
0 Comments