ಗ್ಯಾರಂಟಿಯ ಲಕ್ಷ್ಮಿಯೂ ಇಲ್ಲ, ಉಸ್ತುವಾರಿ ಲಕ್ಷ್ಮಿಯೂ ಇಲ್ಲ:ಠಾಕೂರ್ ಆಕ್ರೋಶ

ಜಾಹೀರಾತು/Advertisment
ಜಾಹೀರಾತು/Advertisment

 ಗ್ಯಾರಂಟಿಯ ಲಕ್ಷ್ಮಿಯೂ ಇಲ್ಲ, ಉಸ್ತುವಾರಿ ಲಕ್ಷ್ಮಿಯೂ ಇಲ್ಲ:ಠಾಕೂರ್ ಆಕ್ರೋಶ

ಉಡುಪಿಯ ಪಾಲಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿಯೂ ಬಂದಿಲ್ಲ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಲಕ್ಷ್ಮಿಯೂ ಬಂದಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಉಪಾಧ್ಯಕ್ಷರಾದ ಮಹೇಶ್ ಠಾಕೂರ್ ವ್ಯಂಗ್ಯವಾಡಿದ್ದಾರೆ. 


ಜಿಲ್ಲೆಯಲ್ಲಿ ಮಳೆಯ ಅವಾಂತರ ಹೆಚ್ಚಿದ್ದು ಅನಾಹುತಗಳು ಸಂಭವಿಸಿದ್ದರು ಕೂಡ ಜಿಲ್ಲೆಯ ಆಡಳಿತದ ಜವಾಬ್ದಾರಿ ವಹಿಸಿಕೊಂಡಿದ್ದ ಎಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇತ್ತ ಮುಖ ಮಾಡಿ ನೋಡಿಯೇ ಇಲ್ಲದಿರುವುದು ವಿಷಾಧನೀಯ‌. ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನ ಸೋಲಿನಿಂದ ಕಂಗೆಟ್ಟಿರುವ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿಯ ಜನತೆಯನ್ನೇ ಮರೆತುಬಿಟ್ಟಿದ್ದಾರೆ. ಕೋಟಿ ಕೋಟಿ ಹಗರಣದಲ್ಲಿ ಮುಳುಗಿ ಹೋಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಉಡುಪಿಯ ಬಿಜೆಪಿಯನ್ನು ಗೆಲ್ಲಿಸಿದ ಮತದಾರರ ಮೇಲೆ ಕಾಳಜಿಯೇ ಇಲ್ಲ ಅನೇಕ ದಿನಗಳಿಂದ ದಾರುಣವಾಗಿ ಮಳೆ ಸುರಿದು ಹಲವು ಅನಾಹುತಗಳ ಸಂಭವಿಸಿದ್ದರು ಕೂಡ ಇತ್ತ ಮುಖ ಮಾಡದೆ ಯಾವುದೇ ಪರಿಹಾರವನ್ನು ನೀಡದೆ ಒಂದೇ ಒಂದು ಸಭೆಯನ್ನು ಮಾಡದೆ ಕಾಳಜಿ ರಹಿತವಾಗಿ ಉದಾಸಿನ ತೋರುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಡೆಯನ್ನು ಧಿಕ್ಕರಿಸುತ್ತೇವೆ ಎಂದು ಠಾಕೂರ್ ಕಿಡಿಕಾರಿದ್ದಾರೆ.

Post a Comment

0 Comments