ಮೂಡುಬಿದಿರೆ: ಸ್ನಾನಗೃಹದಲ್ಲಿ ಉಸಿರುಗಟ್ಟಿ ಯುವಕ ಸಾವು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಸ್ನಾನಗೃಹದಲ್ಲಿ ಉಸಿರುಗಟ್ಟಿ ಯುವಕ ಸಾವು


 

ಮೂಡುಬಿದಿರೆ: ಇಲ್ಲಿನ ಕೋಟೆಬಬಾಗಿಲು ನಿವಾಸಿ ಅನ್ಸಾರ್ ಎಂಬವರ ಪುತ್ರ ಶಾರಿಕ್ ಎಂಬಾತ  ಸ್ನಾನಗೃಹದಲ್ಲಿದ್ದ  ಗ್ಯಾಸ್ ಗೀಸರ್ ನಿಂದ  ಕೆಮಿಕಲ್ ಸ್ಪ್ರೆಡ್ ಆಗಿ ಉಸಿರುಗಟ್ಟಿ  ಭಾನುವಾರ ರಾತ್ರಿ ಮೃತಪಟ್ಟ ಘಟನೆ ನಡೆದಿದೆ.

  ಕೋಟೆಬಾಗಿಲಿನ ಪ್ಲಾಟ್ ಒಂದರಲ್ಲಿ  ಶಾರಿಕ್ ಮತ್ತು ಆತನ ತಾಯಿ ವಾಸವಾಗಿದ್ದರು.ರಾತ್ರಿ ಶಾರಿಕ್ ಸ್ನಾನಕ್ಕೆಂದು ಹೋಗಿದ್ದ. ಆತ ಸ್ನಾನ ಮುಗಿಸಿಕೊಂಡು ಬರುವಾಗ ಯಾವತ್ತೂ ತಡವಾಗುತ್ತಿತ್ತೆಂದು ಆತನ ತಾಯಿ ಮಲಗಿದ್ದರು.ಆದರೆ ತುಂಬಾ ಹೊತ್ತಾದರೂ ಶಾರಿಕ್ ಹೊರಬರಲಿಲ್ಲ.ರಾತ್ರಿ ಮನೆಗೆ ಬಂದಿದ್ದ ಶಾರಿಕ್ ನ ಸಹೋದರ ಶಾರಿಕ್ ನ ಸುದ್ಧಿ ಇಲ್ಲದ್ದನ್ನು ಗಮನಿಸಿ ಸ್ನಾನಗೃಹದ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

   ಸ್ನಾನಗೃಹದ ತುಂಬಾ ಬಂದ್ ಮಾಡಲಾಗಿದ್ದು ಗ್ಯಾಸ್ ಗೀಸರ್ ನ ಕೆಮಿಕಲ್ ಹೊರಹೋಗದೆ ಅದು ಸ್ಪ್ರೆಡ್ ಆಗಿ ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

  ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿ ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದು ಕಲಿಕೆಯಲ್ಲಿ ಮುಂದಿದ್ದ ವಿದ್ಯಾರ್ಥಿಯಾಗಿದ್ದನೆಂದು ತಿಳಿದು ಬಂದಿದೆ.

Post a Comment

0 Comments