ಸಿಎಂ ವಿರುದ್ಧ ಸಿಡಿದೆದ್ದ ಕೋಟ: ಇಂದೇ ಧರಣಿಗೆ ನಿರ್ಧಾರ

ಜಾಹೀರಾತು/Advertisment
ಜಾಹೀರಾತು/Advertisment

 ಸಿಎಂ ವಿರುದ್ಧ ಸಿಡಿದೆದ್ದ ಕೋಟ: ಇಂದೇ ಧರಣಿಗೆ ನಿರ್ಧಾರ 



ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ತನ್ನ ಮೇಲಿನ‌ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ‌ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತಿನ ಭರದಲ್ಲಿ ಹಿಂದಿನ ಸಚಿವರುಗಳ ಹೆಸರು ಹೇಳುತ್ತಾ ಪ್ರಸ್ತುತ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಹೆಸರನ್ನೂ ಹೇಳಿದ್ದರು. ನಂತರ ಸಿಎಂಗೆ ಪತ್ರ ಬರೆದಿದ್ದ ಕೋಟ ಆರೋಪ ವಾಪಾಸು ಪಡೆಯಿರಿ ಎಂದು ಕೇಳಿದ್ದರು.


ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವ ಕಾರಣಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಧರಣಿ ಕೂರಲು ನಿರ್ಧರಿಸಿದ್ದಾರೆ.


"ನನ್ನ ಮೇಲಿನ ಸತ್ಯಕ್ಕೆ ದೂರವಾದ ನಿಮ್ಮ ಆರೋಪ ವಾಪಸ್‌ ಪಡೆಯಿರಿ

ಇಲ್ಲವಾದರೆ ಸಿ.ಬಿ.ಐ. ತನಿಖೆಗೆ ಶಿಫಾರಸ್ಸು ಮಾಡಿ ಎಂದು ಸಿ.ಎಂ ಸಿದ್ದರಾಮಯ್ಯರಿಗೆ ಪತ್ರ ಬರೆದು ಮಾನವಿ ಮಾಡಿದೆ. ಮುಖ್ಯ ಮಂತ್ರಿಗಳ ಮೌನ ನೋವು ತಂದಿದೆ. ಆದ್ದರಿಂದ ಇಂದು ಬೆಳಗ್ಗೆ 10 ಗಂಟೆಗೆ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಸಾಂಕೇತಿಕವಾಗಿ ಧರಣಿ ಕೂರುತ್ತಿದ್ದೇನೆ, ರಾಜ್ಯದ ಜನತೆ ತೀರ್ಪು ನೀಡಲಿ" ಎಂದು ಸಂಸದ ಕೋಟ ಹೇಳಿದ್ದಾರೆ.



Post a Comment

0 Comments