ಮಾನವ-ಪ್ರಕೃತಿಯ ಸಮತೋಲನಕ್ಕೆ ಸಸ್ಯ ಶ್ಯಾಮಲಾ ಅಭಿಯಾನ- ರಶ್ಮಿತಾ ಜೈನ್

ಜಾಹೀರಾತು/Advertisment
ಜಾಹೀರಾತು/Advertisment

 ಮಾನವ-ಪ್ರಕೃತಿಯ ಸಮತೋಲನಕ್ಕೆ ಸಸ್ಯ ಶ್ಯಾಮಲಾ ಅಭಿಯಾನ- ರಶ್ಮಿತಾ ಜೈನ್

ಮೂಡುಬಿದಿರೆ: ಪ್ರಕೃತಿ ಹಚ್ಚ ಹಸಿರಾಗಿದ್ದರೆ ಮಾನವನಿಗೆ  ಉಸಿರು. ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಇದ್ದರೆ ಬದುಕು ಹಸನಾಗುತ್ತದೆ. ಸ ಮಾಜದಲ್ಲಿ ಪರಿಸರ ಜಾಗೃತಿ ಮತ್ತು

ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವು ಅರಳಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಮೂಡಬೇಕು ಎಂದು ಕಲ್ಲಬೆಟ್ಟು ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.



 ಅವರು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಸ್ಯ ಶ್ಯಾಮಲಾ ಎಂಬ ಘೋಷ ವಾಕ್ಯದೊಂದಿಗೆ ಗ್ರಾಮ ಪಂಚಾಯತ್  ಹೊಸಂಗಡಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್  ಇವುಗಳ  ಸಹಯೋಗದಲ್ಲಿ ಮೂಡುಬಿದಿರೆಯಿಂದ ವೇಣೂರಿನವರಗೆ ವಿವಿಧ ತಳಿಗಳ ಒಂದು ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ವಹಿಸಿದ್ದರು.

ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಅನುವಂಶೀಯ ಆಡಳಿತ ಮೊಕ್ತೇಸರ ಎ.ಜೀವಂಧರ್ ಕುಮಾರ್ ಹೊಸಂಗಡಿ ಗ್ರಾಮ ಪಂಚಾಯತ್ ನ ಬಡಕೋಡಿ ಕಿರಿಂಬಿ ಕೆರೆಯ ಹತ್ತಿರ  ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. 

ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್  ಅಧ್ಯಕ್ಷ ಶಿವಯ್ಯ ಎಸ್ ಎಲ್, ಟೆಂಪಲ್ ಟೌನ್ ಮೂಡುಬಿದಿರೆ ರೋಟರಿ ಅಧ್ಯಕ್ಷ ಪೂರ್ಣಚಂದ್ರ ಜೈನ್, ಪ್ರಗತಿಪರ ಕೃಷಿಕರಾದ ವಿದ್ಯಾನಂದ ಜೈನ್ ಬಡಕೋಡಿ, ರೋ. ರಾಘವೇಂದ್ರ ಭಟ್ ನಿಕಟಪೂರ್ವ ಸಹಾಯಕ ಗವರ್ನರ್ ರೋಟರಿ ಜಿಲ್ಲಾ ೩೧೮೧ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Post a Comment

0 Comments