ಪ್ರವೀಣನನ್ನು ನಳಿನ್ ಕುಮಾರ್ ಕೊಲ್ಲಿಸಿದ್ದು ಎಂದ ವ್ಯಕ್ತಿಗಳ ವಿರುದ್ಧ ಪ್ರವೀಣ್ ತಾಯಿ ಗರಂ-ನಳಿನ್ ನಮ್ಮ ಮಗ, ನಿಮ್ಮ ಮಾತು ದೇವರು ಮೆಚ್ಚಲ್ಲ

ಜಾಹೀರಾತು/Advertisment
ಜಾಹೀರಾತು/Advertisment

 ಪ್ರವೀಣನನ್ನು ನಳಿನ್ ಕುಮಾರ್ ಕೊಲ್ಲಿಸಿದ್ದು ಎಂದ ವ್ಯಕ್ತಿಗಳ ವಿರುದ್ಧ ಪ್ರವೀಣ್ ತಾಯಿ ಗರಂ-ನಳಿನ್ ನಮ್ಮ ಮಗ, ನಿಮ್ಮ ಮಾತು ದೇವರು ಮೆಚ್ಚಲ್ಲ

ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚ ಸದಸ್ಯನಾದ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಅಂದಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರೆ ಹಣ ಕೊಟ್ಟು ಮಾಡಿಸಿದ್ದು ಎಂಬ ಸಾಮಾಜಿಕ ಜಾಲತಾಣಗಳ ಮೆಸೇಜ್ ವೈರಲ್ ಆಗಿದ್ದು ಈ ಸಂದೇಶಕ್ಕೆ ಸ್ವತಃ ಪ್ರವೀಣ್ ನೆಟ್ಟರ್ ಅವರ ತಾಯಿ ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.


"ನನ್ನ ಮಗ ಇಲ್ಲ ಎನ್ನುವ ಕೊರಗನ್ನು ನೀಗಿಸಿದ್ದು ನಳಿನ್ ಕುಮಾರ್ ಕಟೀಲು. ಪ್ರವೀಣನಂತೆ ನಳಿನ್ ಕೂಡಾ ನಮ್ಮ ಮಗ. ಪ್ರವೀಣ್ ಇಲ್ಲದಾಗಿನಿಂದ ಇಂದಿನವರೆಗೂ ಅವರು ನಮ್ಮ ಪ್ರತೀ ಆಗು ಹೋಗುಗಳ ಬಗ್ಗೆ ಕಾಳಜಿ ವಹಿಸಿದ್ದಾರೆ. ಆದರೆ ಪ್ರವೀಣನನ್ನು ನಳಿನ್ ಕೊಲೆ ಮಾಡಿಸಿದ್ದು ಎಂದು ಯಾರೋ ಹೇಳುದ್ದು ಕೇಳಿ ಬಹಳ ಬೇಸರವಾಗಿದೆ. ನನ್ನ ಮಗನ ಕೊಂದ ದುಷ್ಟರಿಗೆ ಇಂದು ತಕ್ಕ ಶಿಕ್ಷೆ ಆಗಲೂ ನಳಿನ್ ಕುಮಾರ್ ರವರ ಶ್ರಮ ಬಹಳಷ್ಟಿದೆ. ಅವರಿಗೆ ಅಪವಾದ ತಂದರೆ ದೇವರು ಮೆಚ್ಚಲ್ಲ" ಎಂದು ಅವರು ಹೇಳಿದ್ದಾರೆ.


ಈ ಮಧ್ಯೆ ಈ ಸಂದೇಶ ರವಾನಿಸಿದ ವ್ಯಕ್ತಿಗಳ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Post a Comment

0 Comments