ಅಂದರ್ -ಬಾಹರ್ : ಇರುವೈಲಿನ ಮೂವರ ಬಂಧನ
ಮೂಡುಬಿದಿರೆ : ಅಂದರ್ -ಬಾಹರ್ ಆಟವಾಡುತ್ತಿದ್ದ ಸ್ಥಳಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿ ಇರುವೈಲಿನ ಮೂವರನ್ನು ಬಂಧಿಸಿದ ಘಟನೆ ಭಾನುವಾರ ಮೂಡುಬಿದಿರೆಯಲ್ಲಿ ನಡೆದಿದೆ.
ಇರುವೈಲಿನ ಕೋರೆಬಳಿ ಅಂದರ್ -ಬಾಹರ್ ಆಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿದ್ದು ಸ್ಥಳಕ್ಕೆ ದಾಳಿ ನಡೆಸಿದಾಗ ಕೆಲವು ಮಂದಿ ಪರಾರಿಯಾಗಿದ್ದು
ಇರುವೈಲಿನ ಅಕ್ಬರ್ ,ಗಣೇಶ್ ಹಾಗೂ ಅರುಣ್ ಎಂಬವರು ಪೊಲೀಸರ ಅತಿಥಿಯಾಗಿದ್ದಾರೆ.
ಆರೋಪಿಗಳಿಂದ ಮೂರು ಸಾವಿರ ನಗದು,ಏಳು ಮೊಬೈಲ್ ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments