ವಯೋ ನಿವೃತ್ತಿ ಹೊಂದಿದ ಎಸ್ಐ ದಿವಾಕರ ರೈಗೆ ಬೀಳ್ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ವಯೋ ನಿವೃತ್ತಿ ಹೊಂದಿದ ಎಸ್ಐ ದಿವಾಕರ ರೈಗೆ ಬೀಳ್ಕೊಡುಗೆ



ಮೂಡುಬಿದಿರೆ: ಪೊಲೀಸ್ ಇಲಾಖೆಯ ವಿವಿಧ ಠಾಣೆಗಳಲ್ಲಿ ಕಳೆದ 39 ವರ್ಷಗಳಿಂದ ದಕ್ಷ ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿ, ಮೂಡುಬಿದಿರೆ ಠಾಣೆಯಲ್ಲಿ ವಯೋ ನಿವೃತ್ತಿಯನ್ನು ಹೊಂದಿರುವ ಪೊಲೀಸ್ ಉಪ ನಿರೀಕ್ಷಕ ದಿವಾಕರ ರೈ ಅವರನ್ನು ಭಾನುವಾರ ಮೂಡುಬಿದಿರೆ ಠಾಣೆಯಲ್ಲಿ ವಿಶೇಷ ರೀತಿಯಲ್ಲಿ ಬೀಳ್ಕೊಡಲಾಯಿತು. 


  ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಅವರ ನೇತೃತ್ವದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ದಿವಾಕರ್ ರೈ ಅವರ ನಿವೃತ್ತಿ ಜೀವನವು ಸಂತಸ ಮತ್ತು ಆರೋಗ್ಯದಿಂದ ಕಳೆಯುವಂತ್ತಾಗಲಿ ಎಂಬ ಶುಭ ಹಾರೈಕೆಯನ್ನು ಸರ್ಕಲ್ ಸಹಿತ ಸಿಬಂದಿಗಳು ಸಲ್ಲಿಸಿದರು.


ಮೂಡುಬಿದಿರೆಯ ಜನತೆಯ ಜತೆಗೆ ಸ್ನೇಹ ಮತ್ತು ಆತ್ಮೀಯತೆಯೊಂದಿಗೆ ಬೆರೆಯುತ್ತಿದ್ದ ದಿವಾಕರ ರೈ ಅವರು ತಪ್ಪಿಸ್ಥರಿಗೆ ನಿಷ್ಠೂರವಾದಿಯಾಗಿದ್ದರು. 


ನಿವೃತ್ತಿಯನ್ನು ಹೊಂದಿರುವ ಬಗ್ಗೆ ಘೋಷಿಸಿದ ದಿವಾಕರ್ ಅವರು ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಸಹಕರಿಸಿರುವ ಎಲ್ಲರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

 

ನಂತರ ಠಾಣೆಯಿಂದ ಮನೆಗೆ ಹೊರಟ ಅವರಿಗೆ ಸಿಬಂದಿಗಳು ಪುಷ್ಪವೃಷ್ಠಿಗೈಯುವ ಮೂಲಕ ಅಭಿವಂದಿಸಿದಾಗ ರೈ ಅವರ ಕಣ್ಣಂಚಿನಲ್ಲಿನಲ್ಲಿ ಆನಂದಭಾಷ್ಪ ಕಂಡು ಬಂತು.   


 ಸಂದೇಶ್ ಅವರು ರೈ ಅವರನ್ನು ಠಾಣೆಯಿಂದ ಪೊಲೀಸ್‌ ಜೀಪ್‌ ನಲ್ಲಿಯೇ ಪೊಲೀಸ್ ಅಧಿಕಾರಿಯಾಗಿಯೇ  ಮನೆಗೆ ಕಳುಹಿಸಿಕೊಡುವ ಮೂಲಕ ಗಮನ ಸೆಳೆದರು.

Post a Comment

0 Comments