ಆಳ್ವಾಸ್ "ಹಲಸುಮೇಳ"ಕ್ಕೆ ನೂತನ ಸಂಸದ ಬೃಜೇಶ್ ಚೌಟ ಭೇಟಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಅಳ್ವಾಸ್ ಆಹಾರೋತ್ಸವ ಮಹಾಮೇಳ ಸಮಿತಿ, ಮೂಡುಬಿದಿರೆ ಕೃಷಿ ಇಂಜಿನಿಯರಿಂಗ್ ವಿಭಾಗ ಮತ್ತು ಆಳ್ವಾಸ್ ತಾಂತ್ರಿಕ ಕಾಲೇಜು ಮಿಜಾರು ಇವುಗಳಸಂಯುಕ್ತ ಆಶ್ರಯದಲ್ಲಿ ಕೃಷಿ ಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ "ಸಮೃದ್ಧಿ"ಗೆ ನೂತನ ಸಂಸದ ಬೃಜೇಶ್ ಚೌಟ ಅವರು ಶುಕ್ರವಾರ ಭೇಟಿ ನೀಡಿ ಶುಭ ಹಾರೈಸಿದರು.
.ಈ ಸಂದರ್ಭದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ, ಮೇಘನಾಥ್ ಶೆಟ್ಟಿ, ನಾಗರಾಜ್ ಒಂಟಿಕಟ್ಟೆ, ರಂಜಿತ್ ತೋಡಾರು, ಜೋಯ್ಲಸ್ ಉಪಸ್ಥಿತರಿದ್ದರು.
0 Comments