ಲೆಕ್ಸಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ.
ಮೂಡುಬಿದಿರೆ- ಇಲ್ಲಿನ ಅಶ್ವತ್ಥಪುರದ ಬಳಿ ಇರುವ ಲೆಕ್ಸಾ ಲೈಟಿಂಗ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳನ್ನು ನೆಡಲಾಯಿತು.
ಸಂಸ್ಥೆಯ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ರೋನಲ್ಡ್ ಸಿಲ್ವನ್ ಡಿಸೋಜ ಇವರು ಸಂಸ್ಥೆಯ ಆವರಣದಲ್ಲಿ ಗಿಡ ನೆಟ್ಟರು.
ನಂತರ ಮಾತನಾಡಿದ ಅವರು ಸಂಸ್ಥೆಯ ಉದ್ಯೋಗಿಗಳಿಗೆ ಪರಿಸರ ಹಾಗೂ ಪ್ರಕೃತಿಯನ್ನು ಉಳಿಸಲು ನಾವೆಲ್ಲರೂ ಪ್ರಭುದ್ದರಾಗಿ ಸಮಾಜದಲ್ಲಿ ವ್ಯವಹರಿಸಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಈ ಸಂಸ್ಥೆ ಪ್ರಕೃತಿಯ ಮಡಿಲಲ್ಲಿ ಪ್ರಶಾಂತ ವಾತಾವರಣದಲ್ಲಿ ಇದೆ ಹಾಗೂ ಇಲ್ಲಿ ತಯಾರಿಸಿದ ಉತ್ಕೃಷ್ಟ ಗುಣಮಟ್ಟದ LED ಲೈಟ್ ಗಳು ದೇಶಾದದ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ಬೆಳಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.
0 Comments