ಎಸ್‌ಕೆಜಿಐಯಿಂದ ಹಣ್ಣಿನ ಸಸಿ ವಿತರಣೆ
ಮೂಡುಬಿದಿರೆ : ವಜ್ರ ಮಹೋತ್ಸವ ಆಚರಿಸುತ್ತಿರುವ ಮಂಗಳೂರಿನ ಎಸ್‌ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಮೂಡುಬಿದಿರೆ ಶಾಖೆಯಲ್ಲಿ ವನಮಹೋತ್ಸವದಂಗವಾಗಿ ಹಣ್ಣಿನ ಸಸಿ ವಿತರಣಾ ಕಾರ್ಯಕ್ರಮವು ಗುರುವಾರ ನಡೆಯಿತು.
ಎಸ್‌ಕೆಜಿಐಯ ಉಪಾಧ್ಯಕ್ಷ ಆನಂದ ಆಚಾರ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಗ್ರಾಹಕರಿಗೆ ಗಿಡಗಳನ್ನು ವಿತರಿಸಿದ ಮಾತನಾಡಿ ಪ್ರಕೃತಿ ಸಮತೋಲನದಲ್ಲಿರಬೇಕಾದರೆ ಮರಗಿಡಗಳನ್ನು ಬೆಳೆಸುವುದು ಅಗತ್ಯ. ಸಂಸ್ಥೆಯು ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಕಳಕಳಿ, ಪರಿಸರ ಕಾಳಜಿಯನ್ನು ಹೊಂದಿದ್ದು ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಮಾತನಾಡಿ ಪರಿಸರದ ಮಹತ್ವವನ್ನು ತಿಳಿಸಿದರು.
ಪತ್ರಕರ್ತ ಧನಂಜಯ ಮೂಡುಬಿದಿರೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಕಟ್ಟಡದ ಮಾಲೀಕ ವಿಘ್ನೇಶ್ ಪೈ, ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ, ನಿರ್ದೇಶಕ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.
ಶಾಖಾ ಪ್ರಬಂಧಕಿ ಕಸ್ತೂರಿ ದೇವರಾಜ್ ಸ್ವಾಗತಿಸಿದರು. ಸಿಬಂದಿ ಪ್ರಶಾಂತ ಕಾರ್ಯಕ್ರಮ
0 Comments