ಶಾಲಾ ಆರಂಭೋತ್ಸವ ನೀರ್ಕೆರೆ ಶಾಲೆಗೆ ದಾಖಲಾದ ಪುಟಾಣಿಗಳಿಗೆ ಅಡ್ಡಪಲ್ಲಕಿಯಲ್ಲಿ ಕುಳ್ಳಿರಿಸಿ ಭವ್ಯ ಸ್ವಾಗತ
ಮೂಡುಬಿದಿರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀರ್ಕೆರೆ ಯಲ್ಲಿ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ದಿನವಾಗಿರು ಶುಭ ಶುಕ್ರವಾರದಂದು ನೀರ್ಕೆರೆ ಪ್ರಾಥಮಿಕ ಶಾಲೆಗೆ ದಾಖಲಾದ ಮಕ್ಕಳನ್ನು ಊರಿನ ಮುಖ್ಯ ಬೀದಿಯಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು.
ಒಂದನೇ ತರಗತಿಗೆ ದಾಖಲಾತಿ ಹೊಂದಿದ ಪುಟ್ಟ ಮಕ್ಕಳನ್ನು ಅಡ್ಡಪಲ್ಲಕ್ಕಿಯ ಮೇಲೆ ಕುಳ್ಳಿರಿಸಿ, ಆರತಿ ಬೆಳಗಿ ಪುಷ್ಪವನ್ನು ನೀಡಿ ಮಕ್ಕಳನ್ನು ವಿಶೇಷ ರೀತಿಯಲ್ಲಿ ಶಾಲೆಗೆ ಸ್ವಾಗತಿಸಲಾಯಿತು. ಹೊರಕಾಣಿಕೆಯ ರೂಪದಲ್ಲಿ ಸಾಕಷ್ಟು ತರಕಾರಿ, ವಿವಿಧ ದವಸಧಾನ್ಯಗಳು ಮತ್ತು ಕಲಿಕೋಪಕರಣಗಳನ್ನ ಹೊತ್ತು ಪೋಷಕರು, ವಿದ್ಯಾಭಿಮಾನಿಗಳು ಮಕ್ಕಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಈ ವರ್ಷದ ಯಶಸ್ವಿ ಶಾಲಾ ಪ್ರಾರಂಭ ಉತ್ಸವಕ್ಕೆ ಸಾಕ್ಷಿಯಾಯಿತು. ನಂತರದಲ್ಲಿ ಮಕ್ಕಳಿಗೆ ಸಮಸವಸ್ತ್ರ, ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿ ಮಕ್ಕಳ ಕಲಿಕೆಗೆ ಶುಭ ಕೋರಲಾಯಿತು. ಈ ಶುಭ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಹಳೆ ವಿದ್ಯಾರ್ಥಿಗಳ ಸಂಘದ ಮತ್ತು ತಾಯಂದಿರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪೋಷಕರು ಮತ್ತು ಗ್ರಾಮದ ಪ್ರಮುಖರು ಹಾಜರಿದ್ದರು.
0 Comments