ಶಾಲಾ ಆರಂಭೊತ್ಸವ ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಬಿಆರ್ ಪಿ ಪ್ರೌಢಶಾಲೆ
ಮೂಡುಬಿದಿರೆ: ಶಾಲಾ ಆರಂಭೋತ್ಸವದ ದಿನವಾದ ಶುಕ್ರವಾರದಂದು
ಇಲ್ಲಿನ ಬಾಬು ರಾಜೇಂದ್ರ ಪ್ರೌಢಶಾಲೆಯ ಬಟರ್ ಮೆಂಟ್ ಟ್ರಸ್ಟ್ ವತಿಯಿಂದ ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ , ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂಗ್ಲೀಷ್ ಮಾಧ್ಯಮದ ಸೆಳೆತ ಇರುವ ಮಧ್ಯೆಯೂ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುತ್ತಿರುವುದು ಶ್ಲಾಘನೀಯ. ಈ ವರ್ಷದಿಂದ ಈ ಶಾಲೆಯಲ್ಲಿ ಇಂಗ್ಲೀಷ್ ಮಾತನಾಡಲು ಕಲಿಸಲು ಶಿಕ್ಷಕರೊಬ್ಬರನ್ನು ನೇಮಕಗೊಳಿಸಲಾಗಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ವಿದ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಹಾಗೂ ಓದುವ ಪುಸ್ತಕಗಳನ್ನು ವಿತರಿಸಲಾಯಿತು.
ಆಡಳಿತ ಮಂಡಳಿಯ ಸಂಚಾಲಕ ರಾಮನಾಥ ಭಟ್, ಸದಸ್ಯರಾದ
ರಾಮಪ್ರಸಾದ ಭಟ್ ಮಾತನಾಡಿ ಶಾಲೆಯಲ್ಲಿ ಸರ್ವತೋಮುಖ ಶಿಕ್ಷಣಕ್ಕೆ ಅಡಳಿತ ಮಂಡಳಿ ಸದಾ ಸಿದ್ದವಾಗಿದೆ. ನೀವು ಚೆನ್ನಾಗಿ ವಿದ್ಯಾಭ್ಯಾಸವನ್ನು ಕಲಿಯಬೇಕು, ಶಿಸ್ತನ್ನು ಪಾಲಿಸಬೇಕು ಎಂದು ಹೇಳಿದರು.
ಆಡಳಿತ ಮಂಡಳಿಯ ಸದಸ್ಯರಾದ ಪುಷ್ಪರಾಜ್,
ಅಜಿತ ಪ್ರಸಾದ್, ಇನ್ನರ್ ವೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ಬಿಂದು ಶರತ್, ಕಾರ್ಯದರ್ಶಿ
ರತ್ನ ಪರಾಡ್ಕರ್ ಶಿಕ್ಷಕ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ತೆರಸಾ ಕರ್ಡೋಜಾ ಸ್ವಾಗತಿಸಿದರು. ಶಿಕ್ಷಕ ಕ್ಲೆಮೆಂಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಭರತ್ ನಾಯ್ಕ ವಂದಿಸಿದರು.
ಕುಮಾರಿ ತೇಜಸ್ವಿನಿ ಪ್ರಾರ್ಥಿಸಿದರು.
0 Comments