ಎ ಜಿ ಸೋನ್ಸ್ ಐಟಿಐ ನಲ್ಲಿ ಜಾನ್ಸನ್ ಲಿಫ್ಟ್ಸ್ ಅಂಡ್ ಎಕ್ಸಾಲೆಟರ್ ಕಂಪೆನಿಯಿಂದ ಉದ್ಯೋಗ ಸಂದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 ಎ ಜಿ ಸೋನ್ಸ್ ಐಟಿಐ ನಲ್ಲಿ ಜಾನ್ಸನ್ ಲಿಫ್ಟ್ಸ್ ಅಂಡ್ ಎಕ್ಸಾಲೆಟರ್ ಕಂಪೆನಿಯಿಂದ  ಉದ್ಯೋಗ ಸಂದರ್ಶನ   


ಮೂಡುಬಿದಿರೆ: ಇಲ್ಲಿನ 

ಎ ಜಿ ಸೋನ್ಸ್ ಐಟಿಐ ನಲ್ಲಿ ದೇಶದ ಪ್ರತಿಷ್ಠಿತ ಲಿಫ್ಟ್ ಕಂಪನಿಗಳಲ್ಲಿ ಒಂದಾದ ಜಾನ್ಸನ್ ಲಿಫ್ಟ್ ಅಂಡ್ ಎಕ್ಸಲೆಟರ್ ಕಂಪನಿಯ ತಂಡವು ಐಟಿಐ ಕೊನೆಯ ವರ್ಷದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಬುಧವಾರ ನಡೆಸಿತು.

 ಆಡಳಿತ ಮಂಡಳಿಯ ಅಧ್ಯಕ್ಷ ಕೆ ಅಭಯಚಂದ್ರ ಜೈನ್ ಅವರು ವಿದ್ಯಾರ್ಥಿಗಳಿಗೆ ಶುಭಾಶಯಗಳನ ಐಟಿಐ ವಿದ್ಯಾಭ್ಯಾಸವನ್ನು ಮುಗಿಸಿದ ವಿದ್ಯಾರ್ಥಿಗಳು ತಕ್ಷಣ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಮುಂದಿನ ಭವಿಷ್ಯವನ್ನು ರೂಪುಗೊಳಿಸುವಲ್ಲಿ ಯಶಸ್ವಿಯಾಗಬೇಕು. ಊರಲ್ಲೇ ಕುಳಿತು ಸಣ್ಣಪುಟ್ಟ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ನಿಮ್ಮ ಮುಂದಿನ ಭವಿಷ್ಯವು ಉಜ್ವಲವಾಗಲಾರದು ಎಂದು ಕಿವಿ ಮಾತನ್ನು ಹೇಳಿದರು.



ಆಯ್ಕೆ ಪ್ರಕ್ರಿಯೆಯಲ್ಲಿ ಕಂಪೆನಿಯ ಪ್ರತಿನಿಧಿಗಳಾದ ಬ್ರಾಂಚ್ ಮೆನೇಜರ್  

 ಕುಮಾರ್ ಪ್ರಸಾದ್ ಐತಾಳ್, ತಾಂತ್ರಿಕ ಸಲಹೆಗಾರ ದರ್ಶನ್ ಹಾಗೂ ನಿತಿನ್, ತರಬೇತುದಾರ ನಿತಿನ್  ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ  ಶ್ರೀಕಾಂತ್ ಹೊಳ್ಳ ಸ್ವಾಗತಿಸಿದರು.

Post a Comment

0 Comments