ಅನಾರೋಗ್ಯದಿಂದ ವಾಲ್ಪಾಡಿ ಗ್ರಾಮ ಪಂಚಾಯತ್ ನೌಕರ ನಿಧನ
ಮೂಡುಬಿದಿರೆ: ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಾಲ್ಪಾಡಿ ಗ್ರಾ.ಪಂಚಾಯತ್ ಸಿಬಂದಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅಳಿಯೂರು ನಿವಾಸಿ, ವಾಲ್ಪಾಡಿ ಗ್ರಾ.ಪಂಚಾಯತ್ ನ ಅರೆಕಾಲಿಕ ನೌಕರ ವಸಂತ್ (34ವ) ಮೃತಪಟ್ಟ ವ್ಯಕ್ತಿ.
ಬಡ ಕುಟುಂಬದವರಾಗಿರುವ ವಸಂತ್ ಅವರು ಮನೆಗೆ ಜೀವನಾಧಾರವಾಗಿದ್ದರು. ಕಳೆದ 10 ವರ್ಷಗಳಿಂದ ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಅರೆಕಾಲಿಕ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಏಳು ತಿಂಗಳ ಹಿಂದೆ ವಸಂತ್ ಅವರಲ್ಲಿ ಅನಾರೋಗ್ಯ ಕಂಡು ಬಂದಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಕರುಳಿನ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವುದು ಕಂಡು ಬಂದಿತ್ತು.
ಅಟೆಂಡೆರ್ ಆಗಿ ವಾಲ್ಪಾಡಿ ಪಂಚಾಯತ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಸಂತ್ ಅವರಿಗೆ ಆರೋಗ್ಯಭದ್ರತೆ ಭವಿಷ್ಯ ನಿಧಿ ಸಹಿತ ಸರಕಾರಿ ಸವಲತ್ತುಗಳಿಂದ ವಂಚಿತರಾಗಿದ್ದರು.
ವಸಂತ್ ಅವರಿಗೆ ತಾಯಿ ಮತ್ತು ಪತ್ನಿ ಇದ್ದಾರೆ.
0 Comments