ಮೂಡುಬಿದಿರೆ: ಸಾವಿರಕಂಬ ಬಸದಿಗೆ ವಿದೇಶಿಗರ ಭೇಟಿ
ಮೂಡುಬಿದಿರೆ: ಇಲ್ಲಿನ ಇತಿಹಾಸ ಪ್ರಸಿದ್ದ ಸಾವಿರಕಂಬದ ಬಸದಿಗೆ 120 ಮಂದಿ ವಿದೇಶಿಗರು ಭೇಟಿ ನೀಡಿ, ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಕ್ಷೇತ್ರದ ಕುರಿತು ಸಮಾಲೋಚನೆ ನಡೆಸಿದರು.
ಯುಎಸ್ಎ, ನೆದರ್ ಲ್ಯಾಂಡ್, ಉಕ್ರೇನ್, ಅಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಜಪಾನ್, ಫಿಲಿಫೈನ್ಸ್, ಯುಕೆಯಿಂದ ಮಂಗಳವಾರ ಬಂದ ವಿದೇಶಿಗರು ಬಸದಿಯ ಕಂಬಗಳ ಕೆತ್ತನೆ ಸೂಕ್ಷ್ಮತೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದರು.
ಮಂಗಳೂರು ಮೂಲದ ಕ್ಯಾಲಿಫೋರ್ನಿಯ ಉದ್ಯೋಗಿ ಸಚಿನ್ ಪಡಿವಾಳ್ ಅವರನ್ನು ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು.
ಮಂಗಳೂರಿನ ಟ್ರಾವೆಲ್ ಗೈಡ್ ರೋಹನ್, ರೋಷನ್, ಶ್ರೀ ಕಾಂತ್ ಮೊದಲಾದವರು ಉಪಸ್ಥಿತರಿದ್ದು, ಬಸದಿ ಬಾಗಿಲು, ಭೈರಾದೇವಿ ಮಂಟಪ ಕೆಳ ಅಂತಸ್ತು ಪಟ್ಟಿಯ ವಿಶ್ವ ದ ವೈವಿಧ್ಯ ಮಯ ಚಿತ್ರ ಗಳ ವಿವರ ನೀಡಿದರು.
ಕಾರ್ಕಳ, ಸೋನ್ಸ್ ಫಾರ್ಮ್ ಭೇಟಿ ನೀಡಿದ ಈ ಬೇಸಿಗೆ ಯ ವಿದೇಶಿ ಪ್ರವಾಸಿಗರ ಈ ಸೀಸನಿನ ಕೊನೆಯ ಹಡಗು ಆಗಿದ್ದು, ಅಕ್ಟೋಬರ್ ಕೊನೆಗೆ ಪ್ರವಾಸಿಗರು ಭೇಟಿ ನೀಡಲಿದ್ದಾರೆ.
0 Comments