ಚಿಕ್ಕಮಗಳೂರಿನಲ್ಲಿ ಕೋಟ ಮತಪ್ರಚಾರ:ಬಿಜೆಪಿ ನಾಯಕರ ಸಾಥ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ನಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕಾಲ್ನಡಿಗೆ ಜಾಥಾವನ್ನು ನಡೆಸಿದರು.
ಈ ಕಾರ್ಯಕ್ರಮದಲ್ಲಿ ಉಪಸಭಾಪತಿ ಎಂ.ಕೆ ಪ್ರಾಣೇಶ್, ಬಿಜೆಪಿಯ ಪ್ರಮುಖರಾದ ದೀಪಕ್ ದೊಡ್ಡಯ್ಯ, ಕಲ್ಮುರುಡಪ್ಪ, ಸುಷ್ಮಾ ಜಿ ಎಂ ಅಧ್ಯಕ್ಷರು ರಾಜ್ಯ ಟ್ರಾನ್ಸ್ಪೋರ್ಟ್ ಸೆಲ್ ಮಂಡಲ ಮತ್ತು ಜಿಲ್ಲೆಯ ಅಧ್ಯಕ್ಷರುಗಳು ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಮತ್ತು ಜೆಡಿಸ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments