ಆಳ್ವಾಸ್ ಕಾಲೇಜಿನಲ್ಲಿ ತುಳು ರಂಗ್ - 2024"
ತುಳು ಭಾಷೆಯ ಆಸ್ತಿಯಾಗುವ : ಅರವಿಂದ ಕೆ.ಪಿ
ಮೂಡುಬಿದಿರೆ: ನಾವು ಎಷ್ಟೇ ದೂರವಿದ್ದರೂ ಭಾಷೆ ಎಲ್ಲರನ್ನೂ, ಎಲ್ಲತನವನ್ನೂ ಒಗ್ಗೂಡಿಸುತ್ತದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಲ್ಲವನ್ನೂ ಒಗ್ಗೂಡಿಸುವ ಕಾರ್ಯವನ್ನು ನಾವು ಮಾಡುವುದರ ಜೊತೆಗೆ ತುಳು ಭಾಷೆಯ ಆಸ್ತಿಯಾಗುವ ಕೆಲಸ ಮಾಡಬೇಕಾಗಿದೆ ಎಂದು ಅಂತರಾಷ್ಟ್ರೀಯ ಮೋಟಾರ್ ರೇಸರ್ ಮತ್ತು ಚಲನಚಿತ್ರ ನಟ ಅರವಿಂದ್ ಕೆ. ಪಿ ಹೇಳಿದರು.
ಅವರು ಆಳ್ವಾಸ್ ಪದವಿ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಶನಿವಾರ ಆಯೋಜಿಸಿದ್ದ ಅಂತರ್ ಕಾಲೇಜು "ತುಳು ರಂಗ್ -2024 , ತುಳು ಭಾಷೆ - ಸಂಸ್ಕೃತಿದ ಲೇಸ್ ನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಈ ರೀತಿಯ ಒಕ್ಕೂಟವು ಭಾಷೆಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿತ್ತು. ಪ್ರಸ್ತುತದಲ್ಲಿ ಇದರ ಅನಿವಾರ್ಯ ಹೆಚ್ಚಿದೆ.
ಶಿಕ್ಷಣ ಎನ್ನುವುದು ಒಂದು ಪ್ರಬಲವಾದ ಆಯುಧವಾಗಿದ್ದು , ಜೀವನಕ್ಕೆ ಚೌಕಟ್ಟನ್ನು ಒದಗಿಸುವ ಸಾಧನ, ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಅವರು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಸ್ವಯಂ ಗುರಿ ಬಹಳ ಮುಖ್ಯ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳುವಂತವರಾಗಬೇಕು ಹಾಗೂ ನಾಲ್ಕು ಗೋಡೆಯ ಮಧ್ಯೆ ಕಲಿಯುವ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಭಾಗಿಯಾಗಿ ಪೂರ್ಣ ಶಿಕ್ಷಣದ ಅನುಭವವನ್ನು ಪಡೆಯಬೇಕು ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ, ತುಳುನಾಡಿನ ಆರಾಧನಾ ವ್ಯವಸ್ಥೆಯು ವಿಸ್ತಾರವಾಗಿದೆ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ.
ತುಳುನಾಡಿನ ಕುರಿತು ಅರಿಯುವುದರ ಜೊತೆ ಜೊತೆಗೆ ತುಳು ಸಂಸ್ಕೃತಿ , ಸಂಪ್ರದಾಯ, ಲಿಪಿ, ಮಣ್ಣಿನ ಇತಿಹಾಸ, ಚರಿತ್ರೆಯನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು.
2010ರಲ್ಲಿ ಶೈಕ್ಷಣಿಕ ವ್ಯವಸ್ಥೆಯ ಒಳಗೆ ತುಳುಭಾಷೆ ಕಾಲಿಟ್ಟಿತು. ಇಂದು ಕಾಲೇಜುಗಳಲ್ಲಿ ಪಠ್ಯಕ್ರಮದಲ್ಲಿ ಕಲಿಯುವ ಅವಕಾಶವನ್ನು ಮಂಗಳೂರು ವಿವಿ ಕಲ್ಪಿಸಿಕೊಟ್ಟಿದೆ . ಇದರಿಂದ ಶೈಕ್ಷಣಿಕವಾಗಿ ತುಳು ಭಾಷೆಯ ಉಳಿವು ಮತ್ತು ಪ್ರಗತಿಗೆ ಪೂರಕವಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಭಾಷೆಯ ಪ್ರಾಮುಖ್ಯತೆಯ ಅರಿವು ವಿದ್ಯಾರ್ಥಿಗಳಲ್ಲಿ ಇರುವುದು ಹೆಚ್ಚು ಅವಶ್ಯಕ ಮತ್ತು ಆ ಭಾಷೆಯು ಮೇಲಿರುವ ಕೀಳರಿಮೆಯನ್ನು ಹೋಗಲಾಡಿಸುವುದು ಕೂಡ ಅಷ್ಟೇ ಅವಶ್ಯಕ ಎಂದು ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ , ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ ಯೋಗೀಶ್ ಕೈರೋಡಿ ಇದ್ದರು.
ವಿದ್ಯಾರ್ಥಿನಿ ಸ್ಪರ್ಶ ಪಂಜಿಕಲ್ಲು ಕಾರ್ಯಕ್ರಮ ನಿರೂಪಿಸಿದರು. ನವ್ಯ ಸ್ವಾಗತಿಸಿ, ವಿದ್ಯಾರ್ಥಿ ಸೌರಭ್ ಶೆಟ್ಟಿ ವಂದಿಸಿದರು.
ನಂತರ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಕುಸಲ್ದ ಗೊಬ್ಬು , ಚರ್ಚಾ ಸ್ಪರ್ಧೆ , ಪಾತೆರ ಕತೆ, ಪಜ್ಜೆ ಗೆಜ್ಜೆ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
0 Comments