ಅಂಗಸಾಲೆ - ಗುಡಿಗೆ ಶಿಲಾನ್ಯಾಸ
ಮೂಡುಬಿದಿರೆ : ಶ್ರೀ ಕ್ಷೇತ್ರ ಅಂಗಸಾಲೆಯಲ್ಲಿ ಹಲವಾರು ದೈವಿಕ ಶಕ್ತಿಗಳ ಗುಡಿಗಳು ಪಾಳುಬಿದ್ದಿದ್ದು ಆ ಪೈಕಿ ರಕ್ತೇಶ್ವರಿ ದೈವದ ಕಟ್ಟೆಗೆ ಹಾಗೂ ನಾಗದೇವರಿಗೆ ಶಿಲಾನ್ಯಾಸ, ಬಾಲಾಲಯ ಪ್ರತಿಷ್ಠೆಯು ಸೋಮವಾರ ನಡೆಯಿತು.
ಶ್ರೀ ಕ್ಷೇತ್ರ ಅಂಗಸಾಲೆ ಚಾಮುಂಡಿಬೆಟ್ಟ ಟ್ರಸ್ಟ್ ಈ ಗುಡಿಗಳ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನರವೇರಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಶ್ರೀ ಕ್ಷೇತ್ರ ಅಂಗಸಾಲೆ ಚಾಮುಂಡಿಬೆಟ್ಟ ಟ್ರಸ್ಟ್ ಅಧ್ಯಕ್ಷ ಶ್ಯಾಮ ಹೆಗ್ಡೆ, ಕಾರ್ಯದರ್ಶಿ ಅಜಿತ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಮೂಡಾ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಎಡಪದವು ವೆಂಕಟೇಶ ತಂತ್ರಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
0 Comments